ತಲಪಾಡಿ – ಟೋಲ್ ಸಿಬ್ಬಂದಿಗಳಿಂದ ಚಾಲಕನ ಮೇಲೆ ಹಲ್ಲೆ

ಮಂಗಳೂರು: ಕಾರು ಚಾಲಕನ ಮೇಲೆ ಟೋಲ್ ಗೇಟ್ ಸಿಬ್ಬಂದಿಗಳು ಹಲ್ಲೆ ನಡೆದ ಘಟನೆ ತಲಪಾಡಿ ಟೋಲ್ ಪ್ಲಾಜಾದಲ್ಲಿ ಭಾನುವಾರ ನಡೆದಿದ್ದು, ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ನಡೆದ ಈ ಘಟನೆಯ ದೃಶ್ಯವನ್ನು ವಾಹನ ಸವಾರರು ಸೆರೆಹಿಡಿದಿದ್ದು ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಕಾರು ಚಾಲಕರು ಕೇರಳ ಮೂಲದವರೆಂದು ತಿಳಿದುಬಂದಿದ್ದು, ಕುಟುಂಬಸ್ಥರ ಮುಂದೆ ನಡೆದ ಈ ಹಲ್ಲೆ ಮತ್ತು ಟೋಲ್ ಸಿಬ್ಬಂದಿಗಳ ಗೂಂಡ ವರ್ತನೆಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆ ನಡೆದಿದ್ದು ಕಾರು ಚಾಲಕನನ್ನ ಹಿಡಿದು ಸಿಬ್ಬಂದಿಗಳು ಥಳಿಸಿರುವ ಈ ಘಟನೆ ಉಳ್ಳಾಲ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆಯಾದರೂ ಈವರೆಗೆ ಯಾವುದೇ ದೂರು ದಾಖಲಾಗಿಲ್ಲ.

LEAVE A REPLY

Please enter your comment!
Please enter your name here