ಟಾಪ್‌ ಟೆನ್‌ ಶ್ರೀಮಂತರ ಪಟ್ಟಿಯಿಂದ ಅದಾನಿ ಔಟ್

ಹೊಸದಿಲ್ಲಿ: ಅದಾನಿ ಗ್ರೂಪ್‌ ಸಂಸ್ಥೆಗಳು ವ್ಯಾಪಕ ಅವ್ಯವಹಾರಗಳನ್ನು ನಡೆಸಿವೆ ಎಂದು ಆರೋಪಿಸಿ ಅಮೆರಿಕಾದ ಹಿಂಡೆನ್‌ಬರ್ಗ್‌ ರಿಸರ್ಚ್‌ ಕಂಪೆನಿಯ ವರದಿಯ ಬೆನ್ನಿಗೇ ಅದಾನಿ ಸಂಸ್ಥೆಗಳ ಷೇರು ಮೌಲ್ಯ ಕುಸಿಯಲಾರಂಭಿಸಿದ ಕಾರಣ ಸಂಸ್ಥೆಯ ಅಧ್ಯಕ್ಷ, ಏಷ್ಯಾದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿದ್ದ ಅದಾನಿ ತಮ್ಮ ಒಟ್ಟು ಸಂಪತ್ತಿನಲ್ಲಿ ಸುಮಾರು 8 ಬಿಲಿಯನ್‌ ಡಾಲರ್‌ ಕಳೆದುಕೊಂಡ ಪರಿಣಾಮ ವಿಶ್ವದ 10 ಶ್ರೀಮಂತರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಬ್ಲೂಂಬರ್ಗ್‌ ಬಿಲಿಯನೇರ್ಸ್‌ ಸೂಚ್ಯಂಕದಲ್ಲಿ ಅದಾನಿ 11ನೇ ಸ್ಥಾನಕ್ಕಿಳಿದಿದ್ದಾರೆ. ಫೋರ್ಬ್ಸ್‌ ಬಿಲಿಯನೇರ್ಸ್‌ ಸೂಚ್ಯಂಕದಲ್ಲಿ ಅದಾನಿ ಎಂಟನೇ ಸ್ಥಾನಕ್ಕಿಳಿದಿದ್ದಾರೆ.

LEAVE A REPLY

Please enter your comment!
Please enter your name here