ಮಂಗಳೂರಿಗೆ ಬಂದ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’

ಮಂಗಳೂರು : 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನೊಳಗೊಂಡ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’ ನವ ಮಂಗಳೂರು ಬಂದರಿಗೆ ಮಂಗಳವಾರ ಬೆಳಗ್ಗೆ ಆಗಮಿಸಿತು. ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಯಕ್ಷಗಾನ ಹಾಗೂ ಚೆಂಡೆಯಂತಹ ಸಾಂಪ್ರದಾಯಿಕ ಕಲೆಗಳ ಮೂಲಕ ಸ್ವಾಗತಿಸಲಾಯಿತು. ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರು 15 ಬಸ್‌ಗಳಲ್ಲಿ ಮಂಗಳೂರಿನ ವಿವಿಧ ಪ್ರವಾಸಿ ತಾಣ, ದೇವಾಲಯ, ಚರ್ಚ್, ಮಾರುಕಟ್ಟೆ ಹಾಗೂ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿದರು. ‘ಎಂಎಸ್ ನಾಟಿಕಾ’ ಹಡಗು 180.5 ಮೀಟರ್ ಉದ್ದವಿದ್ದು, 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಮಸ್ಕತ್‌ನಿಂದ ಮಾಲ್ಡಿವ್ಸ್ ಮೂಲಕ ಭಾರತಕ್ಕೆ ಆಗಮಿಸಿದೆ.

LEAVE A REPLY

Please enter your comment!
Please enter your name here