ತಿರುಪತಿಯಲ್ಲಿ ಮಾ.1ರಿಂದ ಮುಖ ಗುರುತಿಸುವಿಕೆ ತಂತ್ರಜ್ಞಾನ

ತಿರುಪತಿ : ಭಕ್ತರ ಇಷ್ಟಾರ್ಥ ನೆರವೇರಿಸುವ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಲು ಸಾಮಾನ್ಯ ಜನರು ಇನ್ನಿಲ್ಲದ ಪಾಡು ಪಡುತ್ತಾರೆ. ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಕಾದು ಸುಸ್ತಾಗಿ ದೇವರ ಮುಂದೆ ಬಂದಾಗ ನಿತ್ರಾಣರಾಗುವ  ನಿರ್ಮಾಣವಾಗುತ್ತದೆ. ಕೆಲವೊಮ್ಮೆ ದರ್ಶನಕ್ಕಾಗಿ 2-3 ದಿನ ಕಾಯಬೇಕಾದ ಪರಿಸ್ಥಿತಿ ಇರತ್ತದೆ. ಇದನ್ನು ಮನಗಂಡ  ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್ ಹೊಸದೊಂದು ವ್ಯವಸ್ಥೆಗೆ  ಮುಂದಾಗಿದ್ದು, ಮಾರ್ಚ್ 1 ರಿಂದ ಭಕ್ತರ ಮುಖ ಗುರುತಿಸುವಿಕೆಯ ಹೊಸ ತಂತ್ರಜ್ಞಾನದ ಮೂಲಕ  ಟೋಕನ್‌ ರಹಿತ  ದರ್ಶನ ಮತ್ತು ವಸತಿ ಹಂಚಿಕೆಯ ನೂತನ ವ್ಯವಸ್ಥೆ ಜಾರಿಗೆ ಬರಲಿದೆ.

ದೇವರ ದರ್ಶನಕ್ಕೆ ಬರುವ ಪ್ರತಿಯೊಂದು ಭಕ್ತರ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ( Facial Recognisation System)  ಪರಿಚಯಿಸಲಾಗುತ್ತದೆ  ಎಂದು ಟ್ರಸ್ಟ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದ್ದು, ಈ ಮೂಲಕ ಅತ್ಯಂತ ಪಾರದರ್ಶಕವಾಗಿ ಟೋಕನ್ ರಹಿತ ದರ್ಶನ ಹಾಗೂ ವಸತಿ ಹಂಚಿಕೆ ವ್ಯವಸ್ಥೆಯನ್ನು ಮಾಡಲಾಗುವುದು ಇದರಿಂದ ಟೋಕನ್ ಪಡೆದು ಗಂಟೆ ಗಟ್ಟಲೆ ಕ್ಯೂನಲ್ಲಿ ನಿಲ್ಲುವುದು ತಪ್ಪಲಿದೆ ಎಂದು ಹೇಳಿದೆ.   

ತಿರುಮಲದಲ್ಲಿ ಸುಮಾರು 7,000 ವಸತಿ ಕಟ್ಟಡಗಳಿದ್ದು, ಇದರಲ್ಲಿ 1,000 ವಸತಿ ಕಟ್ಟಡಗಳ ರೂಮ್ ಬುಕ್ಕಿಂಗ್‌ ಆಗಿರುತ್ತದೆ. ವಿಶ್ವದ ಅತಿ ದೊಡ್ಡ ಶ್ರೀಮಂತ ದೇವಸ್ಥಾನ ಇದಾಗಿದ್ದು, 1933 ರಿಂದ 2022ರ ವರೆಗಿನ ದೇವಸ್ಥಾನದ ಆಸ್ತಿ ಮೌಲ್ಯ 30 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ಎನ್ನಲಾಗಿದೆ. 

LEAVE A REPLY

Please enter your comment!
Please enter your name here