ಮಂಗಳೂರು(ಕಡಪ): ಕಡಪ ಜಿಲ್ಲೆಯ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿ ದಿನದಂದು ಮುಸ್ಲಿಮರು ಪೂಜೆ ಸಲ್ಲಿಸುವುದು ವಾಡಿಕೆ. ದೇವಸ್ಥಾನವು ಪ್ರತಿ ವರ್ಷ ಯುಗಾದಿ ದಿನದಂದು ಮುಸ್ಲಿಂ ಭಕ್ತರಿಂದ ತುಂಬಿರುತ್ತದೆ.
ಇದಕ್ಕೆ ಪ್ರಮುಖ ಕಾರಣವೆಂದರೆ ವೆಂಕಟೇಶ್ವರ ದೇವರ ಎರಡನೇ ಪತ್ನಿ ಬೀಬಿ ನಾಂಚಾರಮ್ಮ ಮುಸ್ಲಿಂ ಮಹಿಳೆಯಾಗಿರುವುದು ಎನ್ನಲಾಗಿದೆ. ಇದರಿಂದಾಗಿ ಪ್ರತಿ ವರ್ಷ ಯುಗಾದಿಯಂದು ಮುಸ್ಲಿಮರು ದೇಗುಲಕ್ಕೆ ಬಂದು ಪೂಜಿಸುತ್ತಾರೆ. ಕಡಪ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷ ಯುಗಾದಿಯನ್ನು ಭರ್ಜರಿಯಾಗಿ ಆಚರಿಸಲಾಗುತ್ತದೆ. ಈ ವೇಳೆ, ಮುಸ್ಲಿಂ ಮಹಿಳೆಯರು ಬೀಬಿ ನಾಂಚಾರಮ್ಮ ಅವರನ್ನು ಜನ್ಮದಾತೆ ಎಂದು ಪರಿಗಣಿಸಿ ಸೀರೆಯನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ.
ಇಷ್ಟೇ ಅಲ್ಲದೆ, ವೆಂಕಟೇಶ್ವರನನ್ನು ಪೂಜಿಸುತ್ತಾರೆ ಮತ್ತು ಈ ಮೂಲಕ ಭಕ್ತಿಯನ್ನು ಪ್ರದರ್ಶಿಸುತ್ತಾರೆ. ವೆಂಕಟೇಶ್ವರ ದೇವರು ತಮ್ಮ ಸೊಸೆಯನ್ನು ಮದುವೆಯಾದ ಕಾರಣ, ಮುಸ್ಲಿಮರು ಅವರನ್ನು ಸಂಬಂಧಿ ಎಂದು ಪರಿಗಣಿಸುತ್ತಾರೆ.ಯುಗಾದಿಯ ದಿನದಂದು ದೇಗುಲದಲ್ಲಿ ಮೊದಲ ಪೂಜೆಯನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಈ ಪೂಜೆಯಲ್ಲಿ ಮುಸ್ಲಿಮರು ತಮ್ಮ ಹರಕೆಗಳನ್ನು ಪೂರೈಸುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ, ಇಷ್ಟಾರ್ಥಗಳು ಖಂಡಿತವಾಗಿಯೂ ನೆರವೇರುತ್ತವೆ ಎಂಬುದು ಮುಸ್ಲಿಮರ ನಂಬಿಕೆಯಾಗಿದೆ. ಅದಕ್ಕಾಗಿಯೇ ಪ್ರತಿ ವರ್ಷ ಯುಗಾದಿ ದಿನದಂದು ಮುಸ್ಲಿಮರು ದೇಗುಲಕ್ಕೆ ಬಂದು ವೆಂಕಟೇಶ್ವರನನ್ನು ಪೂಜಿಸುತ್ತಾರೆ.