ಹೊಸ ಹೂಡಿಕೆಗೆ ಖಚಿತ ಒಪ್ಪಂದ ಮಾಡಿಕೊಂಡಿಲ್ಲ- ಫಾಕ್ಸ್ಕಾನ್

ತೈಪೆ:  ಫಾಕ್ಸ್ಕಾನ್ ಭಾರತದಲ್ಲಿ ಹೊಸ ಹೂಡಿಕೆಯನ್ನು ಮಾಡಲಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಫಾಕ್ಸ್ಕಾನ್ ತನ್ನ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದನ್ನು ತೈವಾನಿನ ಪ್ರಮುಖ ತಂತ್ರಜ್ಞಾನ ಸಂಸ್ಥೆ  ಶನಿವಾರ ಒಪ್ಪಿಕೊಂಡಿದೆಯಾದರೂ ತಾನು ಯಾವುದೇ ಬದ್ಧ, ಖಚಿತ ಒಪ್ಪಂದಗಳನ್ನು ಮಾಡಿಕೊಂಡಿರುವುದನ್ನು ನಿರಾಕರಿಸಿದೆ.

ಫೆ.27ರಿಂದ ಮಾ.4ರವರೆಗೆ ತನ್ನ ಅಧ್ಯಕ್ಷ ಹಾಗೂ ಸಿಇಒ ಯಂಗ್ ಲಿಯು ಅವರ ಭಾರತ ಭೇಟಿ ಸಂದರ್ಭದಲ್ಲಿ ಹೊಸ ಹೂಡಿಕೆಗಳಿಗಾಗಿ ಯಾವುದೇ ಖಚಿತ ಒಪ್ಪಂದವನ್ನು ಮಾಡಿಕೊಂಡಿಲ್ಲ ಎಂದು ಫಾಕ್ಸ್ಕಾನ್ ಹೇಳಿಕೆಯಲ್ಲಿ ತಿಳಿಸಿದೆ. ಮಾತುಕತೆಗಳು ಮತ್ತು ಆಂತರಿಕ ಪುನರ್ಪರಿಶೀಲನೆ ನಡೆಯುತ್ತಿವೆ. ಮಾಧ್ಯಮಗಳಲ್ಲಿ ಹೇಳಿರುವ ಹೂಡಿಕೆ ಮೊತ್ತಗಳು ಕಂಪನಿಯು ಬಿಡುಗಡೆ ಮಾಡಿರುವ ಮಾಹಿತಿಯಲ್ಲ, ಉದ್ಯೋಗಗಳ ಅಂಕಿಅಂಶಗಳು ಕಂಪನಿಯೊಂದಿಗೆ ನೇರ ಉದ್ಯೋಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದೂ ಫಾಕ್ಸ್ಕಾನ್ ಹೇಳಿದೆ. 

ಐಫೋನ್ ಗಳ ಪ್ರಮುಖ ತಯಾರಿಕೆ ಕಂಪನಿಯಾಗಿರುವ ಫಾಕ್ಸ್ಕಾನ್ ಗೆ ಬೆಂಗಳೂರಿನ ಹೊರವಲಯದಲ್ಲಿ ಜಾಗವನ್ನು ಒದಗಿಸಲಾಗಿದೆ. 300 ಎಕರೆ ವಿಸ್ತೀರ್ಣದ ಈ ಕ್ಯಾಂಪಸ್ ಆ್ಯಪಲ್ ಫೋನ್ ಗಳ ಬೃಹತ್ ತಯಾರಿಕೆ ಘಟಕಗಳಲ್ಲಿ ಒಂದಾಗಲಿದೆ. ನೂತನ ಘಟಕದಲ್ಲಿ ಐಫೋನ್ ಗಳನ್ನು ತಯಾರಿಸಲಿದೆ ಮತ್ತು ಇದರಿಂದ ಒಂದು ಲಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಕರ್ನಾಟಕದ ಮುಖ್ಯಮತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್‌ ಮಾಡಿದ್ದರು. 

LEAVE A REPLY

Please enter your comment!
Please enter your name here