ಹಸು ಕೊಂದವರು ನರಕದಲ್ಲಿ ಬೇಯುತ್ತಾರೆ – ಅಲಹಾಬಾದ್‌ ಹೈ ಕೋರ್ಟ್

ಅಲಹಾಬಾದ್: ಹಿಂದೂ ಧರ್ಮದಲ್ಲಿ ಗೋವುಗಳ ಪ್ರಾಮುಖ್ಯತೆ ಮತ್ತು ಗೋಹತ್ಯೆಯನ್ನು ತಡೆಯುವ  ಅಗತ್ಯವನ್ನು ಅಲಹಾಬಾದ್ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ. ದೇಶದಲ್ಲಿ ಗೋಹತ್ಯೆ ನಿಷೇಧಿಸಲು ಮತ್ತು ಅದನ್ನು ‘ರಕ್ಷಿತ ರಾಷ್ಟ್ರ ಪ್ರಾಣಿ’ ಎಂದು ಘೋಷಿಸಲು ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅಲಹಾಬಾದ್ ಹೈಕೋರ್ಟ್  ಹೇಳಿರುವುದಾಗಿ  ಲೈವ್‌ ಲಾ ವರದಿ ಮಾಡಿದೆ.

ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಎಲ್ಲ ಧರ್ಮಗಳನ್ನು ಗೌರವಿಸಬೇಕು ಮತ್ತು ಹಿಂದೂ ಧರ್ಮದಲ್ಲೂ ನಾವು ಗೌರವವನ್ನು ಹೊಂದಿರಬೇಕು. ನಂಬಿಕೆಯ ಪ್ರಕಾರ ಗೋವು ದೈವಿಕ ಮತ್ತು ನೈಸರ್ಗಿಕ ಪ್ರಯೋಜನವನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಅದನ್ನು ರಕ್ಷಿಸಬೇಕು ಎಂದು ನ್ಯಾಯಮೂರ್ತಿ ಶಮೀಮ್ ಅಹ್ಮದ್ ಅವರ ಪೀಠವು ಅಭಿಪ್ರಾಯಪಟ್ಟಿದೆ. ಹಸುವಿನ ಆರಾಧನೆಯ ಮೂಲವು ವೇದಗಳ ಅವಧಿಯದ್ದಾಗಿದೆ. ಯಾರಾದರೂ ಹಸುಗಳನ್ನು ಕೊಲ್ಲುವ ಅಥವಾ ಇತರರನ್ನು ಕೊಲ್ಲಲು ಅನುಮತಿಸುವವರನ್ನು ಅವರ ದೇಹದ ಮೇಲೆ ಇರುವ ಒಂದೊಂದು ಕೂದಲಿನ ಲೆಕ್ಕದಲ್ಲಿನ ವರ್ಷಗಳ ಕಾಲ ನರಕದಲ್ಲಿ  ಬೇಯುವರೆಂದು ವೇದಗಳಲ್ಲಿ ತಿಳಿಸಲಾಗಿದೆ ಎಂದು ಪೀಠವು ಹೇಳಿದೆ. ಅಬ್ದುಲ್ ಖಾಲಿಕ್ ಎಂಬಾತ ಗೋಹತ್ಯೆ ಮತ್ತು ಗೋವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ನಿರಾಕರಿಸಿದಾಗ ಈ ಅವಲೋಕನಗಳನ್ನು ನ್ಯಾಯಾಲಯವು ಮಾಡಿತು. 

LEAVE A REPLY

Please enter your comment!
Please enter your name here