ಯು ಪಿ ಯ ಮನೆಯೊಂದರಲ್ಲಿ 288 ಕಚ್ಚಾ ಬಾಂಬ್‌ ಪತ್ತೆ-ಇಬ್ಬರ ಬಂಧನ

ಕಾನ್ಪುರ್: ಕ್ರೈಂ ಬ್ರಾಂಚ್ ಮತ್ತು ಕಾನ್ಪುರ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಲಕ್ಷ್ಮೀಪುರದ 20 ವರ್ಷದ ಯುವತಿಯೊಬ್ಬಳ ಮನೆಯೊಂದರಿಂದ ಮಾ.3ರಂದು ಕನಿಷ್ಠ 288 ಕಚ್ಚಾ ಬಾಂಬ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣ ಸಂಬಂಧ ವಾಸು ಸೋಂಕರ್, ಟೀನಾ ಗುಪ್ತಾ ಎಂಬವರನ್ನು ಬಂಧಿಸಲಾಗಿದ್ದು, ದೊಡ್ಡ ಸಂಭವನೀಯ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯ ಪ್ರಕಾರ, ಬದರ್ ಜಿಲ್ಲೆಯ ನಿವಾಸಿ ವಾಸು ಸೋಂಕರ್ ಎಂಬಾತನನ್ನು ಪೊಲೀಸರು ಮಾ.2ರಂದು 16 ಕಚ್ಚಾ ಬಾಂಬ್ ಗಳೊಂದಿಗೆ ಬಂಧಿಸಿದ್ದರು. ವಿಚಾರಣೆ ವೇಳೆ ಸೋಂಕರ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕ್ರೈಂ ಬ್ರಾಂಚ್’ ಪೊಲೀಸರೊಂದಿಗೆ ಲಕ್ಷ್ಮೀಪುರದಲ್ಲಿರುವ ವಾಸು ಅವರ ಗೆಳತಿ 20 ವರ್ಷದ ಟೀನಾ ಗುಪ್ತಾ ಮನೆ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 288 ಬಾಂಬ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಟೀನಾ ಗುಪ್ತಾಳನ್ನು ಬಂಧಿಸಲಾಗಿದ್ದು,ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here