ಸಾವಿನಲ್ಲಿ ಒಂದಾದ ತಾಯಿ ಮಗ – ಅಮ್ಮನ ಪ್ರೀತಿಗೆ ಮತ್ತೊಂದು ಸಾಕ್ಷಿ

ಬಾಗಲಕೋಟೆ: ಭೂಮಿಯಲ್ಲಿರುವ ಎಲ್ಲಾ ಅಮ್ಮಂದಿರದ್ದು ಇದೇ ಕಥೆ. ಮಕ್ಕಳನ್ನು ಅಪಾರವಾಗಿ ಪ್ರೀತಿಸುವ ಇವರು, ತಮ್ಮ ಮಕ್ಕಳಿಗೆ ಪ್ರೀತಿ, ಶಕ್ತಿ, ಧೈರ್ಯ ಮತ್ತು ನಂಬಿಕೆಯ ಜೀವ. ಮಕ್ಕಳ ಕಷ್ಟಗಳಿಗೆ ಕಣ್ಣೀರಾಗುವ ಯಾವುದೇ ತ್ಯಾಗಕ್ಕೂ ಸಿದ್ದರಾಗುವ ಅಮ್ಮ ಎಂಬ ನಡೆದಾಡುವ ದೇವರಿಗೆ ಮಕ್ಕಳೇ ಸರ್ವಸ್ವ. ಮಕ್ಕಳ ಜತೆಗಿನ ಅಮ್ಮನ ಬಾಂಧವ್ಯಕ್ಕೆ ಸಾಕ್ಷಿಯಾಗಿ ಈ ಹಿಂದೆ ಅನೇಕ ಘಟನೆಗಳು ನಡೆದಿದೆ. ಕಲಾದಗಿಯಲ್ಲಿ ಸಾವಿನಲ್ಲಿ ಒಂದಾದ ತಾಯಿ ಮಗನ ಈ ಘಟನೆ ಈ ಪಟ್ಟಿಗೆ ಇನ್ನೊಂದು ಸೇರ್ಪಡೆ.

ಬಾಗಲಕೋಟೆಯ ಕಲಾದಗಿ ಗ್ರಾಮದ ದಶರಥ ದುರ್ವೆ ಮತ್ತು ಶಾವಕ್ಕ ದುರ್ವೆ ಸಾವಿನಲ್ಲಿ ಒಂದಾದ ತಾಯಿ ಮಗ. ವಾರದ ಹಿಂದೆ ಅನಾರೋಗ್ಯಕ್ಕೆ ಒಳಗಾದ ಮಗ ದಶರಥ ಚಿಕಿತ್ಸೆ ಫಲಕಾರಿಯಾಗದೆ ಮಾ.4 ರಂದು ಕೊನೆಯುಸಿರೆಳೆಯುತ್ತಾನೆ. ಮಗನ ಸಾವಿನಿಂದ ದುಃಖಿತರಾಗಿದ್ದ ತಾಯಿ, ಮಗನ ಅಗಲಿಕೆಯ ನೋವು ಸಹಿಸಲಾಗದೆ ಹೃದಯಾಘಾತಕ್ಕೆ ಒಳಗಾಗಿ ಮಗನ ದಾರಿ ಹಿಡಿಯುತ್ತಾರೆ. ಸಾವಿನಲ್ಲಿ ಒಂದಾದ ತಾಯಿ ಮಗನ ಅಂತ್ಯ ಕ್ರಿಯೆಯನ್ನು ಒಟ್ಟಿಗೆ ನಡೆಸಲಾಗುತ್ತದೆ. ಈಗ ಕಲಾದಗಿ ಗ್ರಾಮದ ತುಂಬಾ ತಾಯಿ ಮಗನ ಪ್ರೀತಿಯ ವಿಚಾರ ಅವರನ್ನು ಜೀವಂತವಾಗಿರಿಸಿದೆ.

LEAVE A REPLY

Please enter your comment!
Please enter your name here