ಬೆಂಗಳೂರು: ಪರಿಸರ ಕಾಳಜಿ ವ್ಯಕ್ತಪಡಿಸಿರುವ ಬೆಂಗಳೂರಿನ ವಿದ್ಯಾರ್ಥಿಯೊಬ್ಬನನ್ನು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ವೈದ್ಯ ದೀಪಕ್ ಕೃಷ್ಣ ಮೂರ್ತಿ ಮಗನ ಚಟುವಟಿಕೆ ಕುರಿತಂತೆ ಪೋಸ್ಟ್ ಹಂಚಿ ಕೊಂಡಿದ್ದು ಶೈಕ್ಷಣಿಕ ವರ್ಷ ಕೊನೆಗೊಂಡ ಬಳಿಕ ನೋಟು ಪುಸ್ತಕದ ಉಳಿದ ಹಾಳೆಗಳನ್ನು ಬಳಸಿ ಅಭ್ಯಾಸ ಪುಸ್ತಕ ಮಾಡುವ ಮಗನ ಆಸಕ್ತಿಯ ಬಗ್ಗೆ ಪ್ರಸ್ತಾಪಿಸಿ ಮರ ಉಳಿಸುವ ನಿಟ್ಟಿನಲ್ಲಿ ಮಗ ಈ ರೀತಿ ಮಾಡುತ್ತಿದ್ದಾನೆ ಎಂದು ಹೇಳಿದ್ದರು. ದೀಪಕ್ ಕೃಷ್ಣ ಮೂರ್ತಿ ಯವರ ಪೋಸ್ಟ್ ಪ್ರಧಾನಿಯ ಗಮನ ಸೆಳೆದಿದ್ದು ತುಂಬಾ ಒಳ್ಳೆಯ ಕೆಲಸ ಎಂದು ಶ್ಲಾಘಿಸಿದ್ದಾರೆ.