ಮಂಗಳೂರು: ಹಾಸನ ಜಿಲ್ಲೆಯ 82 ವರ್ಷ ವಯಸ್ಸಿನ ವೃದ್ಧರೊಬ್ಬರ ಸಹಿತ ದೇಶದಲ್ಲಿ ಎಚ್3ಎನ್2 ನಿಂದ ಹರಡುವ ಇನ್‌ಫ್ಲೂಯೆನ್ಝಾ ಸೋಂಕಿಗೆ ಇಬ್ಬರು ಬಲಿಯಾಗಿದ್ದಾರೆ.
ಈ ಸೋಂಕಿಗೆ ಮೃತಪಟ್ಟ ಇನ್ನೊಬ್ಬ ವ್ಯಕ್ತಿ ಹರ್ಯಾಣದವರಾಗಿದ್ದಾರೆ. ಹಾಸನದ ಹಿರೇಗೌಡ ಎಂಬವರನ್ನು ಫೆಬ್ರವರಿ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದರೆ ಮಾರ್ಚ್ 1 ರಂದು ಅವರು ಮೃತಪಟ್ಟಿದ್ದರು. ಅವರು ಮಧುಮೇಹ ಮತ್ತು ಹೈಪರ್‌ಟೆನ್ಶನ್‌ನಿಂದ ಬಳಲುತ್ತಿದ್ದರು.