ದಶಪಥದಲ್ಲಿಉದ್ಗಾಟನೆಗೆ ಮುನ್ನ ಅಪಘಾತದಲ್ಲಿ 84 ಸಾವು
ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರನ್ನು ಬೆಸೆಯುವ ದಶಪಥದ ಎಕ್ಸ್ ಪ್ರೆಸ್ ಹೈವೇಯಲ್ಲಿ ಕಳೆದ 6 ತಿಂಗಳಲ್ಲಿ 84 ಕ್ಕೂ ಹೆಚ್ಚು ಮಂದಿ ಅಪಘಾತದಿಂದ ಮೃತ ಪಟ್ಟಿದ್ದಾರೆ.
ಅತೀ ಬೇಗನೆ ಗುರಿ ತಲುಪಬೇಕು ಎಂಬ ದಾವಂತವೇ ಅಪಘಾತಕ್ಕೆ ಕಾರಣ. ಬೆಂಗಳೂರಿನಿಂದ ಮಂಡ್ಯ ಜಿಲ್ಲೆಯ ನಿಡಗಟ್ಟದ ತನಕ ಕಾಮಗಾರಿ ಪೂರ್ತಿಯಾಗಿದೆ. ಕಳೆದ 6ತಿಂಗಳ ಅವಧಿಯಲ್ಲಿ 225 ಅಪಘಾತಗಳು ಈ ಹೆದ್ದಾರಿಯಲ್ಲಿ ಸಂಭವಿಸಿದ್ದು 43 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ.
ಯುದ್ದ ವಿಮಾನಗಳ ಡಿಕ್ಕಿ- ಇಬ್ಬರು ಪೈಲಟ್ಸ್ ಸಾವು
ಇಟಲಿ: ಇಟಲಿಯಲ್ಲಿ ತರಬೇತಿ ನಿರತವಾಗಿದ್ದ ಎರಡು ಯುದ್ದ ವಿಮಾನಗಳು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಪೈಲಟ್ ಗಳು ಮೃತ ಪಟ್ಟಿದ್ದಾರೆ. ಒಂದು ವಿಮಾನ ಡಿಕ್ಕಿ ಹೊಡೆದ ಬಳಿಕ ಜನವಸತಿ ಪ್ರದೇಶದ ಕಾರಿನ ಮೇಲೆ ಬಿದ್ದಿದ್ದು ಮತ್ತೊಂದು ಹೊಲಕ್ಕೆ ಅಪ್ಪಳಿಸಿದೆ.
ಸಂಸದೀಯ ಸ್ಥಾಯಿ ಸಮಿತಿಗೆ ವೈಯಕ್ತಿಕ ಸಿಬ್ಬಂದಿ ನೇಮಕ ಮಾಡಿದ ಉಪರಾಷ್ಟ್ರಪತಿ
ದೆಹಲಿ: 12 ಸಂಸದೀಯ ಸ್ಥಾಯಿ ಸಮಿತಿ ಮತ್ತು 8 ಇಲಾಖಾ ಸ್ಥಾಯಿ ಸಮಿತಿಗಳಿಗೆ ತಮ್ಮ ವೈಯಕ್ತಿಕ 8 ಸಿಬ್ಬಂದಿಗಳನ್ನು ನೇಮಕ ಮಾಡಿರುವ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಅವರ ನಿರ್ಧಾರವು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಇದು ಅಕ್ರಮ ಹಾಗೂ ಉಪ ರಾಷ್ಟ್ರಪತಿಗಳು ಅಧಿಕಾರದ ದುರುಪಯೋಗ ಮಾಡಿದ್ದಾರೆಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.
ಕುಕ್ಕರ್ ಬಾಂಬ್ ಗೆ ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ಟಾರ್ಗೆಟ್
ಮಂಗಳೂರು: ಆಸ್ಪತ್ರೆಯಿಂದ ಬಿಡುಗಡೆಗೊಂಡು ಎನ್ ಐ ಎ ವಶದಲ್ಲಿರುವ ಶಾರೀಕ್ ನನ್ನು ವಿಚಾರಣೆಗೆ ಗುರಿ ಪಡಿಸಲಾಗಿದ್ದು ಕದ್ರಿ ದೇವಸ್ಥಾನದ ಚಪ್ಪಲಿ ಸ್ಟ್ಯಾಂಡ್ ನಲ್ಲಿ ಬಾಂಬ್ ಇಡಲು ಪ್ಲಾನ್ ಮಾಡಿದ್ದೆ ಎಂಬ ವಿಚಾರವನ್ನು ಶಾರಿಕ್ ಬಾಯ್ಬಿಟ್ಟಿದ್ದಾನೆ.
ಪಳ್ಳಿಯಬ್ಬ ಕೊಲೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮಂಗಳೂರು: ಪಾವೂರು ಮಲಾರ್ ನ ಪಳ್ಳಿಯಬ್ಬ ಕೊಲೆ ಪ್ರಕರಣದ ಆರೋಪಿಗಳಿಗೆ ಇಲ್ಲಿನ ಮೂರನೇ ಹೆಚ್ಚುವರಿ ಸೆಷನ್ಸ್ ಮತ್ತು ಜಿಲ್ಲಾ ನ್ಯಾಯಾಲಯ 5 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.