ಮಂಗಳೂರು: ಸರಕು ಸಾಗಾಣಿಕೆ ರೈಲಿನಲ್ಲಿ ಸಾಗಿಸಲಾಗುತ್ತಿದ್ದ ಗ್ಯಾಸ್ ಟ್ಯಾಂಕರ್ ನಲ್ಲಿ ಗ್ಯಾಸ್ ಸೋರಿಕೆಯಾಗುತ್ತಿದೆ ಎನ್ನುವ ಶಂಕೆ ಹಿನ್ನಲೆಯಲ್ಲಿ ಮಂಗಳೂರಿನಿಂದ ಹೊರಟ ರೈಲನ್ನು ಮತ್ತೆ ಮಂಗಳೂರಿಗೆ ಹಿಂದಕ್ಕೆ ತರಿಸಲಾಗಿದೆ. ರೈಲು ಮಂಗಳೂರಿನಿಂದ ಹೊರಟು 7 ಕಿ ಮೀ ಪ್ರಯಾಣದ ಬಳಿಕ ಗ್ಯಾಸ್ ಸೋರಿಕೆಯಾಗಿದೆ. ಎಚ್ ಪಿ ಸಿ ಎಲ್ ಗೆ ರೈಲು ಮರಳಿದ್ದು ಜೋಕಟ್ಟೆ ಮತ್ತು ಸುತ್ತು ಮುತ್ತಲಿನ ಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು ರೈಲು ಹಳಿ ಬಳಿ ಜನ ಸಂಚಾರವನ್ನು ನಿಯಂತ್ರಿಸಲಾಗಿದೆ.