ತಲ್ವಾರ್ ದಾಳಿಯಿಂದ‌ ಮಗನನ್ನು ರಕ್ಷಿಸಿದ ತಾಯಿ-ರೌಡಿಗಳನ್ನು‌ ಅಟ್ಟಾಡಿಸಿ‌ ಹಿಮ್ಮೆಟ್ಟಿಸಿದ ತಾಯಿಗೆ ನೆಟ್ಟಿಗರಿಂದ ಪ್ರಶಂಸೆ- ವಿಡಿಯೋ ವೈರಲ್

ಮಂಗಳೂರು (ಮಹಾರಾಷ್ಟ್ರ): ತಾಯಿಯ ನಿಷ್ಕಲ್ಮಶ ಪ್ರೀತಿಗೆ ಈ ಘಟನೆ ಜ್ವಲಂತ ನಿದರ್ಶನ. ಮಗನನ್ನು ರಕ್ಷಿಸುವ ತಾಯಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಪ್ರಶಂಸೆ ವ್ಯಕ್ತವಾಗಿದೆ.

ಮಹಾರಾಷ್ಟ್ರದಲ್ಲಿ ಹಾಡಹಗಲು ಬೈಕ್​ ಮೇಲಿದ್ದ ಯುವಕನ ಮೇಲೆ ಲಾಂಗ್ ನಿಂದ ರೌಡಿಗಳು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಮಗನ ಪಕ್ಕದಲ್ಲೇ ನಿಂತಿದ್ದ ತಾಯಿಗೆ ಅದು ಏನು ಅನ್ನಿಸಿದೆಯೋ ಗೊತ್ತಿಲ್ಲ ಆದರೆ ಕ್ಷಣ ಮಾತ್ರದಲ್ಲಿ ನಡೆಯ ಬಹುದಾದ ಅನಾಹುತವನ್ನು ಗ್ರಹಿಸಿದ ಆ ತಾಯಿ ಮಗನ ಮೇಲಾಗುವ ದಾಳಿಯನ್ನು ತಡೆದಿದ್ದಾರೆ. ಮಗನನ್ನು ರಕ್ಷಿಸುವುದರ ಜೊತೆಗೆ ಲಾಂಗ್‌ ಹಿಡಿದು ದಾಳಿ ಮಾಡಲು ಬಂದ ಪುಂಡರ ಮೇಲೆ ಕಲ್ಲು ತೂರಿ  ಅವರನ್ನು ಹಿಮ್ಮೆಟ್ಟಿಸಿದ್ದಾರೆ. ಮಗನ ರಕ್ಷಣೆಯೇ ಧ್ಯೇಯವಾಗಿದ್ದ ಆ ತಾಯಿ ತನ್ನ ಮೇಲೂ ಪುಂಡರು ಲಾಂಗ್​ ಬೀಸಬಹುದು ಎಂಬ ಭಯವಿಲ್ಲದೇ ರೌಡಿಗಳನ್ನು ಅಟ್ಟಾಡಿಸಿ ಸ್ಥಳದಿಂದ ಕಾಲು ಕೀಳುವಂತೆ ಮಾಡಿದ್ದಾಳೆ.

ತಾಯಿಯ ಸಮಯ ಪ್ರಜ್ಞೆ, ಚಾಣಾಕ್ಷತನ, ಧೈರ್ಯದಿಂದ ಮಗ ಅಪಾಯದಿಂದ ಪಾರಾಗಿದ್ದಾನೆ. ಮಗ ಅಘಾತದಿಂದ ಏನಾಗುತ್ತಿದೆ ಎಂದು  ಅಂದುಕೊಳ್ಳುವಷ್ಟರಲ್ಲಿ ತಾಯಿ ಎಲ್ಲವನ್ನು ಮುಗಿಸಿ ಬಿಟ್ಟಿದ್ದಾಳೆ. ಈ ಘಟನೆ ಆ.18ರಂದು ಮಧ್ಯಾಹ್ನ 1:30ರ ಸುಮಾರಿಗೆ ಕೊಲ್ಲಾಪುರದ ಜಯಸಿಂಗ್‌ಪುರ ಪ್ರದೇಶದಲ್ಲಿ ನಡೆದಿದ್ದು, ಇಡೀ ಘಟನೆ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೂವರು ದಾಳಿಕೋರ ಪುಂಡರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಹಿಂದೆ ಬೈಕ್‌ ಮೇಲಿದ್ದ ವ್ಯಕ್ತಿ ದಾಳಿಕೋರರ ಜತೆ ಜಗಳವಾಡಿದ್ದನ್ನೇ ನೆಪವಾಗಿಟ್ಟು ಅಟ್ಯಾಕ್‌ ಗೆ ಮುಂದಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

https://x.com/i/status/1825495767710109821

LEAVE A REPLY

Please enter your comment!
Please enter your name here