ಬೆಳಿಗ್ಗೆ ಉದ್ಘಾಟನೆ ಕಂಡ ಹೆದ್ದಾರಿಯಲ್ಲಿ ಮದ್ಯಾಹ್ನ ಅಪಘಾತ

ಮಂಡ್ಯ- ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೈವೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಿ ಕೆಲ ಹೊತ್ತಿನಲ್ಲೇ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಉದ್ಘಾಟನೆಗೆ ಮುನ್ನ ಈ ಹೆದ್ದಾರಿ 84 ಅಪಘಾತಗಳಿಗೆ ಸಾಕ್ಷಿಯಾಗಿದ್ದು, ಉದ್ಘಾಟನೆಯ ಬಳಿಕದ ಮೊದಲ ಅಪಘಾತ ಇದಾಗಿದೆ.

ಆಶ್ಚರ್ಯಕರ ರೀತಿಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಾಣಾಪಾತದಿಂದ ಪಾರಾಗಿದ್ದಾರೆ.  ಮದ್ದೂರು ಪಟ್ಟಣದ ಶಿಂಷಾ ನದಿ ಸೇತುವೆ ಬಳಿಯ ಫ್ಲೈ ಓವರ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.ಕಾರಿನಲ್ಲಿದ್ದ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಮೂವರಿಗೆ ಸಣ್ಣ ಪುಟ್ಟ ಗಾಯವಾಗಿದೆ. ಕಾರಿನಲ್ಲಿದ್ದವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಮದ್ದೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ.

LEAVE A REPLY

Please enter your comment!
Please enter your name here