ಮಡಿಕೇರಿ: ತಾಪಮಾನ ಹೆಚ್ಚಾಗುತ್ತಿದ್ದಂತೆ ನೀರು ಮತ್ತು ಆಹಾರದ ಕೊರತೆ ಎದುರಿಸುತ್ತಿರುವ ಕಾಡುಪ್ರಾಣಿಗಳು ನಾಡಿನ ಕಡೆ ಮುಖ ಮಾಡುತ್ತಿದೆ. ನೀರು ಕುಡಿಯಲೆಂದು ತೋಟದಲ್ಲಿರುವ ನೀರಿನ ಸಂಗ್ರಹ ತೊಟ್ಟಿ ಬಳಿ ಬಂದ ಕಾಡೆಮ್ಮೆಯೊಂದು ಆಯತಪ್ಪಿ ತೊಟ್ಟಿಗೆ ಬಿದ್ದಿದೆ. ತೊಟ್ಟಿಗೆ ಬಿದ್ದು ಮೇಲೆ ಬರಲಾಗದೆ ತೊಟ್ಟಿಯಲ್ಲಿ ಪರದಾಡುತ್ತಿದ್ದ ಕಾಡೆಮ್ಮೆಯನ್ನು ಗಮನಿಸಿದ ಸ್ಥಳೀಯ ಕಾರ್ಮಿಕರು ಮಾಲೀಕರ ಮೂಲಕ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ತಂಡ , ತೋಟದ ಮಾಲೀಕರ ಮತ್ತು ಸ್ಥಳೀಯರ ಸಹಕಾರದಿಂದ ಕಾರ್ಯಾಚಾರಣೆ ನಡೆಸಿ, ಜೆ ಸಿ ಬಿ ಯಂತ್ರದ ಮೂಲಕ ತೊಟ್ಟಿಯ ಒಂದು ಭಾಗದಲ್ಲಿ ಕಾಡೆಮ್ಮೆ ಮೇಲೆ ಬರಲು ದಾರಿ ಮಾಡಿಕೊಟ್ಟು ಕಾಡೆಮ್ಮೆಯನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ