ಬಂಟ್ವಾಳ: ಯುವಕನೋರ್ವ ಕಾರಿನಲ್ಲಿ ಕುಳಿತ ಸ್ಥಿತಿಯಲ್ಲಿ ಮೃತ ಪಟ್ಟ ಘಟನೆ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ಸಮೀಪದ ಗೊಳ್ತಮಜಲು ನಿವಾಸಿ ಜಗದೀಶ್ ಈ ರೀತಿ ಮೃತಪಟ್ಟ ದುರ್ದೈವಿ.
ನಿನ್ನೆ ಬೆಳಿಗ್ಗೆ ತರವಾಡು ಮನೆಯಲ್ಲಿ ನಡೆದ ದೈವದ ಕಾರ್ಯಕ್ರಮಕ್ಕೆ ಮಕ್ಕಳೊಂದಿಗೆ ಬಂದಿದ್ದ ಜಗದೀಶ್ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವ ವೇಳೆ ಕಾರು ಚಲಾಯಿಸಲು ಕಷ್ಟವಾಗುತ್ತಿದೆ, ನೀವು ಮನೆಗೆ ಹೋಗಿ, ನಾನು ಆಮೇಲೆ ಬರುತ್ತೇನೆ ಎಂದು ತನ್ನ ಭಾವನೊಂದಿಗೆ ಮಕ್ಕಳನ್ನು ಕಳುಹಿಸಿ ಕಾರಿನಲ್ಲಿ ಮಲಗಿದ್ದರು. ರಾತ್ರಿ ಏಳು ಘಂಟೆಯಾದರು ಜಗದೀಶ್ ಮನೆಗೆ ಬಾರದ ಹಿನ್ನಲೆಯಲ್ಲಿ ಬಂದು ಪರಿಶೀಲಿಸಿದಾಗ ಕಾರಿನಲ್ಲಿ ಜಗದೀಶ್ ಕುಳಿತು ಮಲಗಿರುವ ಸ್ಥಿತಿಯಲ್ಲಿರುವುದು ಕಂಡು ಬಂದಿದೆ. ಕಾರಿನ ಬಾಗಿಲು ತೆರೆದದಾಗ ಜಗದೀಶ್ ಮೃತ ಪಟ್ಟಿರುವುದು ಗಮನಕ್ಕೆ ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದು ಸಾವು ಹೃದಯಾಘಾತದಿಂದ ಸಂಭವಿಸಿದೆಯೇ? ಇಲ್ಲ ಕಾರಿನಲ್ಲಿ ಆಮ್ಲಜನಕದ ಕೊರತೆಯಿಂದ ಸಂಭವಿಸಿದೆಯೇ? ಇನ್ನಷ್ಟೇ ತಿಳಿಯಬೇಕಿದೆ.