ದೇವಸ್ಥಾನಕ್ಕೆ ತಂದ ಹೂವಿನ ಹಾರದಲ್ಲಿ ಮಾಂಸದ ತುಂಡು – ಆರೋಪಿಗಳ ಬಂಧನ

 

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರದ ದೊಡ್ಡಬೆಳವಂಗಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕನಸವಾಡಿ ಶ್ರೀ ಶನಿಮಹಾತ್ಮ ದೇವಸ್ಥಾನಕ್ಕೆ ಮಾಂಸದ ತುಂಡುಗಳನ್ನು ಒಳಗೊಂಡ ಹೂವಿನ ಹಾರ ತಂದಿದ್ದ ಆರೋಪಿಗಳನ್ನು ದೇವಾಲಯದ ಸಿಬ್ಬಂದಿ ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಬಂಧಿತ ಆರೋಪಿಗಳನ್ನು ಹೊಸಕೋಟೆ ತಾಲೂಕಿನ ಕಂಬಳಹಳ್ಳಿ ರಾಜು ಮತ್ತು ವೈಟ್‌ಫೀಲ್ಡ್‌ ಮೂಲದ ಅಟೋ ಚಾಲಕ ಸೋಮಶೇಖರ್‌ ಎಂದು ಗುರುತಿಸಲಾಗಿದೆ. ಇದೇ ಆರೋಪಿಗಳು ತಿಂಗಳ ಹಿಂದೆ ಹೂವಿನ ಹಾರಗಳೊಂದಿಗೆ ಮಾಂಸದ ತುಂಡುಗಳನ್ನು ಪೋಣಿಸಿ ಸಿದ್ಧಪಡಿಸಲಾಗಿದ್ದ ಹಾರವನ್ನು ತಂದಿದ್ದರು ಎನ್ನಲಾಗಿದೆ. ಮಧ್ಯಾಹ್ನದ ಸಮಯವಾಗಿದ್ದರಿಂದ ದೇವಾಲಯದ ಸಿಬ್ಬಂದಿ ಹೂವಿನ ಹಾರವನ್ನು ಬಾಗಿಲಲ್ಲೇ ಪಡೆದು ಸಂಜೆಯ ಅಲಂಕಾರಕ್ಕೆ ಬಳಸಲಾಗುವುದು ಎಂದು ಹೇಳಿದ್ದರು. ಸಂಜೆ ಹಾರಗಳನ್ನು ತೆಗೆದು ನೀರು ಹಾಕುವ ವೇಳೆ ಮಾಂಸದ ತುಂಡು ಪೋಣಿಸಿದ್ದು ಬೆಳಕಿಗೆ ಬಂದಿದೆ. ದೇವಸ್ಥಾನದ ಸಿಸಿಟಿವಿ ದೃಶ್ಯಗಳನ್ನು ಬಳಸಿ ಆರೋಪಿಗಳನ್ನು ಗುರುತಿಸಿ ಹಾರ ಕೊಡುವ ಸಂದರ್ಭದಲ್ಲೇ ಹಿಡಿದು ಪೊಲೀಸರ ವಶಕ್ಕೆ ನೀಡಲಾಗಿದೆ.

LEAVE A REPLY

Please enter your comment!
Please enter your name here