ಬಾಗಲಕೋಟೆ:ಆಸ್ತಿಗಾಗಿ ಕಲಹ ನಡೆದು ಸಹೋದರಿಯರಿಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಬನಹಟ್ಟಿಯ ಕುರುಬರ ಓಣಿಯಲ್ಲಿ ಮಾರ್ಚ್ 13 ರಂದು ನಡೆದಿದೆ.
ಯಲ್ಲವ್ವ ಭುಜಂಗ (48) ಮತ್ತು ಬೌರವ್ವ ಭುಜಂಗ (45 ) ಹತ್ಯೆಯಾದ ದುರ್ದೈವಿ ಸಹೋದರಿಯರು. ಸೋದರತ್ತೆ ಮಗ ಕಾಡಪ್ಪ ಎನ್ನುವಾತ ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದು ಇಬ್ಬರನ್ನು ಸಾಯಿಸಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗಿದ್ದರು ಇಬ್ಬರೂ ಸಹೋದರಿಯರು ತವರು ಮನೆಯಲ್ಲಿ ಉಳಿದಿದ್ದು ನಿತ್ಯ ಆಸ್ತಿಗಾಗಿ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. ಪೊಲೀಸ್ ತನಿಖೆ ಮುಂದುವರಿದಿದೆ.