ಮಾ.20: ಬೆಂಗಳೂರಿನಲ್ಲಿ ಆಟೋ ಬಂದ್

ಬೆಂಗಳೂರು:ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರ‌್ಯಾಪಿಡೋ ಬೈಕ್ ಟ್ಯಾಕ್ಸಿಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಆಟೋ ಚಾಲಕರು ಮಾರ್ಚ್ 20ರಂದು ಆಟೋ ಸಂಚಾರ ಸಂಪೂರ್ಣ ಬಂದ್ ಮಾಡಲು‌ ಮುಂದಾಗಿದ್ದಾರೆ.

ಬೆಂಗಳೂರು ನಗರದ 21 ಆಟೋ ಚಾಲಕರ‌ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಆದರ್ಶ ಆಟೋ ಯೂನಿಯನ್ ಅಧ್ಯಕ್ಷ ಮಂಜುನಾಥ್ ಹೇಳಿದ್ದಾರೆ.
ಸಾರಿಗೆ ಇಲಾಖೆ ಈಗಾಗಲೇ ಓಲಾ, ಉಬರ್ ಬೈಕ್ ಟ್ಯಾಕ್ಸಿಗೆ ಅನುಮತಿ ನೀಡಿದೆ. ಇದರಿಂದ ಆಟೋ ಚಾಲಕರ ಆದಾಯಕ್ಕೆ ಹೊಡೆತ ಬಿದ್ದಿದೆ. ಈಗ ಮತ್ತೆ  ರ‌್ಯಾಪಿಡೋ ಬೈಕ್ ಟ್ಯಾಕ್ಸಿಗೆ ಅನುಮತಿ ಅನುಮತಿ ನೀಡಿದ್ದು ಕೂಡಲೇ ಅನುಮತಿ ವಾಪಸ್ ಪಡೆಯಬೇಕೆಂದು ಸಂಘಟನೆ ಒತ್ತಾಯಿಸಿದೆ.

ನಗರದಲ್ಲಿ ಮಾ.16ರಿಂದ ಎರಡು ದಿನಗಳ ಕಾಲ ಆಟೋಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಸಾಂಕೇತಿಕವಾಗಿ  ಪ್ರತಿಭಟನೆ ಮಾಡುತ್ತೇವೆ.ಇಷ್ಟರಲ್ಲಿ ಸರಕಾರ ಅನುಮತಿ ವಾಪಾಸ್‌ ಪಡೆಯದಿದ್ದಲ್ಲಿ ಮಾ.20ರಂದು 2.10 ಲಕ್ಷ ಆಟೋಗಳ ಸಂಚಾರ ಬಂದ್ ಮಾಡುವ ಮೂಲಕ  ಪ್ರತಿಭಟನೆ ನಡೆಸಲಿದೆ. ಅಂದೇ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮನಗೆ ಮುತ್ತಿಗೆ ಹಾಕಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here