ಬೆಳಗಾವಿಗೆ ರಾಹುಲ್‌ – ನಾಲ್ಕನೇ ಗ್ಯಾರಂಟಿ ಯೋಜನೆ ಘೋಷಣೆ – ಯುವಕರಿಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ

ಮಂಗಳೂರು: ಯುವಕ್ರಾಂತಿ ಸಮಾವೇಶದಲ್ಲಿ ಭಾಗವಹಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ  ಖರ್ಗೆ ಮತ್ತು ಪಕ್ಷದ ವರಿಷ್ಟ ರಾಹುಲ್‌ ಗಾಂಧಿ ಬೆಳಗಾವಿಗೆ ಆಗಮಿಸಿದ್ದು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಡಿ ಕೆ ಶಿವಕುಮಾರ್‌, ಸಿದ್ದರಾಮಯ್ಯ ಸ್ವಾಗತಿಸಿದರು. ಕೆ ಸಿ ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲ, ಬಿ ಕೆ ಹರಿ ಪ್ರಸಾದ್,  ಎಂ ಬಿ ಪಾಟೀಲ್‌ , ಸತೀಶ್‌ ಜಾರಕಿಹೊಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಮಾವೇಶದಲ್ಲಿ  ಭಾಗವಹಿಸಿದ ರಾಹುಲ್‌ ಗಾಂಧಿ ರಾಜ್ಯದ ಯುವ ಸಮೂಹಕ್ಕಾಗಿ ಹೊಸ ಯೋಜನೆ ʼಯುವ ನಿಧಿʼ ಯನ್ನು ಘೋಷಿಸಿದ್ದಾರೆ. ಈ ಯೋಜನೆಯನ್ವಯ ರಾಜ್ಯದ ನಿರುದ್ಯೋಗಿ ಯುವಕರಿಗೆ ಪ್ರತೀ ತಿಂಗಳು ನಿರುದ್ಯೋಗ ಭತ್ಯೆ ದೊರಕಲಿದೆ. ಪದವಿ ಪಡೆದ ಯುವಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಮತ್ತು ಡಿಪ್ಲೋಮಾ ಪಡೆದ ಯುವಕರಿಗೆ ಪ್ರತಿ ತಿಂಗಳು 1500 ರೂ. ನಿರುದ್ಯೋಗ ಭತ್ಯೆ ದೊರಕಲಿದೆ. ಈಗಾಗಲೇ ಮೂರು ಯೋಜನೆಗಳನ್ನು ಪ್ರಕಟಿಸಿರುವ ರಾಜ್ಯ ಕಾಂಗ್ರೇಸ್‌ ಇಂದು ನಾಲ್ಕನೇ ಗ್ಯಾರಂಟಿ ಯೋಜನೆಯನ್ನು ಪ್ರಕಟಿಸಿದೆ.

https://twitter.com/i/status/1637728113760280576

LEAVE A REPLY

Please enter your comment!
Please enter your name here