ಸರಸ ಬಹಿರಂಗಗೊಂಡಾಗ ವಿರಸ – ದೂರು ದಾಖಲು- ಪಾದ್ರಿ ಬಂಧನ

ಮಂಗಳೂರು: ಯುವತಿಯೊಂದಿಗಿನ ಸರಸದ ಫೋಟೋ, ವಿಡಿಯೋ‌ ಬಹಿರಂಗವಾದ ಹಿನ್ನೆಲೆಯಲ್ಲಿ ನಾಪತ್ತೆಯಾಗಿದ್ದ ತಮಿಳುನಾಡು ಕನ್ಯಾಕುಮಾರಿ ಚರ್ಚ್‌ವೊಂದರ ಯುವ ಪಾದ್ರಿಯನ್ನು ಪೊಲೀಸರು ಬೆಂಗಳೂರಿನಲ್ಲಿ ಮಾ.20ರಂದು ಬಂಧಿಸಿದ್ದಾರೆ.

ಕನ್ಯಾಕುಮಾರಿ ಬಳಿಯ ತಾಕಳಾ ಚರ್ಚ್‌ನ 29 ವರ್ಷದ ಯುವ ಪಾದ್ರಿ ಬೆನ್ಡಿಕ್ಟ್ ಆಂಟೊ ಬಂಧಿತ ಆರೋಪಿ. ಬೆನ್ಡಿಕ್ಟ್ ಆಂಟೊ ಲ್ಯಾಪ್‌ಟಾಪ್‌ನಿಂದ ಆಸ್ಟಿನ್ ಎನ್ನುವ ಸ್ನೇಹಿತನೊಬ್ಬ ಅವರ ಖಾಸಗಿ ವಿಡಿಯೊ ಮತ್ತು ಫೋಟೊಗಳನ್ನು ಕದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ. ಘಟನೆಯ ಸಂತ್ರಸ್ತ ಯುವತಿ ನಾಗರ್‌ಕೋಯಿಲ್‌ ಠಾಣೆ ಪೊಲೀಸರಿಗೆ ಈ ಬಗ್ಗೆ ಇಬ್ಬರ ವಿರುದ್ದ ದೂರು ನೀಡಿದ್ದರು. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಬೆನ್ಡಿಕ್ಟ್ ಆಂಟೊನನ್ನು ಕನ್ಯಾಕುಮಾರಿ ಪೊಲೀಸರು ಬಂಧಿಸಿದ್ದು ಈತನ ಸ್ನೇಹಿತನಿಗಾಗಿ ಶೋಧ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here