ಉರಿ- ನಂಜೇ ಗೌಡ ವಿವಾದ- ಒಕ್ಕಲಿಗ ಸಮುದಾಯದ ಅಸ್ಮಿತೆಗೆ ಧಕ್ಕೆ-ನಿರ್ಮಲಾನಂದನಾಥ ಸ್ವಾಮೀಜಿ

ಮಂಗಳೂರು: ರಾಜ್ಯ ರಾಜಕಾರಣದಲ್ಲಿ ಉರಿ ಗೌಡ ಮತ್ತು ನಂಜೇ ಗೌಡ ವಿಚಾರ ಜನರಲ್ಲಿ ಮತ್ತು ಸಮಾಜದಲ್ಲಿ ಬಹಳಷ್ಟು ಗೊಂದಲ ಸೃಷ್ಟಿ ಮಾಡುತ್ತಿದೆ. ಈ ವಿಚಾರ ಮೂಲಕ ಒಂದು ಸಮುದಾಯದ ಭಾವನೆಗೆ ಧಕ್ಕೆ ತರುವಂತಹ ಕೆಲಸ ಕೂಡ ನಡೆಯುತ್ತದೆ. ಹಾಗಾಗಿ ಈ ಚರ್ಚೆಯನ್ನು ತಕ್ಷಣ ನಿಲ್ಲಿಸ ಬೇಕು ಎಂದು ಶ್ರೀ ಕ್ಷೇತ್ರ ಆದಿ ಚುಂಚನಗಿರಿ ಮಹಾ ಸಂಸ್ಥಾನದ ಡಾ. ನಿರ್ಮಲಾನಂದನಾಥ ಸ್ವಾಮೀಜಿ ತಾಕೀತು ಮಾಡಿದ್ದಾರೆ.

ಉರಿ ಗೌಡ ಮತ್ತು ನಂಜೇ ಗೌಡ ಎಂಬ ಕಾಲ್ಪನಿಕ ಪಾತ್ರಗಳನ್ನಿಟ್ಟುಕೊಂಡು ಕೆಲೆದ ಕೆಲ ದಿನಗಳಿಂದ ನಡೆಯುತ್ತಿರುವ ರಾಜಕೀಯಾಟಗಳಿಗೆ ಉತ್ತರವೆಂಬಂತೆ ಇಂದು ಸ್ವಾಮೀಜಿ ಮೌನ ಮುರಿದಿದ್ದಾರೆ. ಉರಿಗೌಡ ನಂಜೇ ಗೌಡರ ಬಗ್ಗೆ  ಸರಿಯಾದ ಐತಿಹ್ಯ ದಾಖಲೆಗಳಿಲ್ಲದೆ ಚಿತ್ರ ನಿರ್ಮಾಣ ಮಾಡಿದರೆ ಒಕ್ಕಲಿಗ ಸಮಾಜದ ಅಸ್ಮಿತೆಗೆ ಧಕ್ಕೆಯಾಗಲಿದೆ ಎಂದಿರುವ ಸ್ವಾಮೀಜಿ ಸಿನಿಮಾ ನಿರ್ಮಾಣದಿಂದ ಹಿಂದೆ ಸರಿಯುವಂತೆ ಮುನಿರತ್ನ ಅವರಿಗೆ ತಾಕೀತು ಮಾಡಿದ್ದಾರೆ. 

ಉರೀ ಗೌಡ ನಂಜೇ ಗೌಡ ವಿವಾದದ ಬಗ್ಗೆ ಸ್ವಾಮೀಜಿ ಏನು ಹೇಳಿದ್ದಾರೆ?

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here