ಮಂಗಳೂರು : ಷೇರು ಮಾಡುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿಸಿ ವಂಚಿಸಿದ ಆರೋಪಿ ಕೇರಳದ ಕಲ್ಲಿಕೋಟೆಯ ಜಿಜೋ ಜಾನ್ (29) ಎಂಬಾತನನ್ನು ಮಂಗಳೂರು ನಗರ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಪ್ರತೀ ತಿಂಗಳು ಶೇ.15ರಷ್ಟು ಲಾಭ ನೀಡುವುದಾಗಿ ಮಂಗಳೂರಿನ ಶಕ್ತಿನಗರ ನಿವಾಸಿಯಿಂದ 1ಕೋ.ರೂ ಹೂಡಿಕೆ ಮಾಡಿಸಿ ಲಾಭ ನೀಡದೆ ವಂಚಿಸಿದ್ದ ಎಂದು ಆರೋಪಿಸಲಾಗಿತ್ತು.