ಮಂಗಳೂರು : 2022ರ ನವೆಂಬರ್ ನಲ್ಲಿ ಮಂಗಳೂರು ಹೊರವಲಯದ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುರುಷೋತ್ತಮ ಪೂಜಾರಿ ಕುಟುಂಬಕ್ಕೆ ಗುರು ಬೆಳದಿಂಗಲು ಫೌಂಡೇಶನ್ ವತಿಯಿಂದ ನವೀಕರಿಸಲಾದ ಮನೆಯನ್ನು ಮಾ.22ರ ಯುಗಾದಿಯಂದು ಹಸ್ತಾಂತರಿಸಲಾಯಿತು. ದುರಸ್ಥಿ ಕಾಣದೆ ಹೀನಾಯ ಸ್ಥಿತಿಯಲ್ಲಿದ್ದ ಮನೆಯನ್ನು ಸುಮಾರು 6ಲಕ್ಷ ರೂ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಯುಗಾದಿ ಹಬ್ಬದ ಕೊಡುಗೆ ಎಂಬಂತೆ ಪುರುಷೋತ್ತಮ ಪೂಜಾರಿ ಮತ್ತು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಗುರು ಬೆಳದಿಂಗಲು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಜೆಪ್ಪು ಸಂತ ಆಂತೋನಿ ಆಶ್ರಮದ ನಿರ್ದೇಶಕ ಫಾದರ್ ಜೆ ಬಿ ಕ್ರಾಸ್ತಾ,ಮಾಜಿ ರಾಜ್ಯಸಭಾ ಸದಸ್ಯ ಬಿ ಇಬ್ರಾಹೀಂ, ಉದ್ಯಮಿ ರೋಹನ್ ಮೊಂತೆರೋ, ಡಾ ಯೂಸುಫ್ ಕುಂಬ್ಲೆ ಪ್ರವೀಣ್ ಚಂದ್ರ ಆಳ್ವ, ಸತ್ಯಜಿತ್ ಸುರತ್ಕಲ್, ಧರ್ಮರಾಜ ಅಮ್ಮುಂಜೆ, ರಘುನಾಥ್ ಮಹಾಬೇನ್, ಡಿ ಕೆ ಅಶೋಕ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಮತ್ತು ಫೌಂಡೇಶನ್ ಪದಾಧಿಕಾರಿಗಳು ಉಪಸ್ಥಿತರಿದ್ದರು,