ಪೀಸ್‌ ಟೀವಿ ಸಂಸ್ಥಾಪಕ ಜಾಕೀರ್‌ ನಾಯ್ಕ್‌ ಬಂಧನ ಸಾಧ್ಯತೆ

ಮಂಗಳೂರು :ಇಸ್ಲಾಮಿಕ್‌ ವಿದ್ವಾಂಸ ಮತ್ತು ಭೋದಕ ಜಾಕೀರ್‌ ನಾಯ್ಕ್‌ ಮಾ.23ರಂದು ಒಮನ್‌ ಗೆ ಭೇಟಿ ನೀಡಲಿದ್ದು ಈ ವೇಳೆ ಅವರನ್ನು ಬಂಧಿಸಲು ಭಾರತೀಯ ಗುಪ್ತಚರ ಸಂಸ್ಥೆಗಳು ಒಮನ್‌ ಅಧಿಕಾರಿಗಳ ಸಂಪರ್ಕದಲ್ಲಿದೆ ಎಂದು ಹಿಂದೂಸ್ಥಾನ್‌ ಟೈಮ್ಸ್‌ ಸುದ್ದಿ  ಜಾಲತಾಣವೊಂದು ವರದಿ ಮಾಡಿದೆ.

ಓಮನ್‌ ನಲ್ಲಿ 23ರಿಂದ ಆರಂಭವಾಗುವ  ರಂಜಾನ್‌ ಪ್ರಯುಕ್ತ  2 ಉಪನ್ಯಾಸ ಕಾರ್ಯಕ್ರಮಗಳಿಗೆ ಜಾಕೀರ್‌ ನಾಯ್ಕ್‌ ನನ್ನು ಆಹ್ವಾನಿಸಲಾಗಿದೆ. ಒಮನ್‌ ನ ಔಕಾಫ್‌ ಮತ್ತು ಧಾರ್ಮಿಕ ವ್ಯವಹಾರಗಳ ಸಚಿವಾಲಯ ಮಾ23 ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ದಿ ಕುರಾನ್‌ ಏ ಗ್ಲೋಬಲ್ ನೆಸೆಸಿಟಿ ಎನ್ನುವ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದಾರೆ. ಇದಲ್ಲದೆ ಮಾ.25ರಂದು ಸುಲ್ತಾನ್‌ ಕಾಬೂಸ್‌ ವಿಶ್ವವಿದ್ಯಾಲಯದಲ್ಲಿ ಪ್ರವಾದಿ ಮಹಮ್ಮದ್‌ ಮಾನವ ಕುಲಕ್ಕೆ ಕರುಣಾಮಯಿ ಎಂಬ ವಿಚಾರದಲ್ಲಿ ಉಪನ್ಯಾಸ ನೀಡಲಿದ್ದು ಜಾಕೀರ್‌ ನಾಯ್ಕ್‌ ಒಮನ್‌ ಗೆ ಆಗಮಿಸಲಿದ್ದಾರೆ.

ಸ್ಥಳೀಯ ಕಾನೂನುಗಳ ಅಡಿಯಲ್ಲಿ ಜಾಕೀರ್‌ ನಾಯ್ಕ್‌ ನನ್ನು ಬಂಧಿಸಲು ಮತ್ತು ಗಡಿಪಾರು ಮಾಡಲು ಸ್ಥಳೀಯ ಭಾರತೀಯ ರಾಯಬಾರಿ ಕಚೇರಿ ಗುಪ್ತಚರ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದೆ ಎನ್ನಲಾಗಿದೆ. ಒಮನ್‌ ನಲ್ಲಿರುವ ಭಾರತೀಯ ರಾಯಬಾರಿ ಒಮಾನಿ ಮಿನಿಷ್ಟರ್‌ ಆಫ್‌ ಫಾರಿನ್‌ ಅಫೈರ್ಸ್‌ ಅವರ ಬಳಿಯೂ ವಿಷಯ ಪ್ರಸ್ತಾಪಿಸಿರುವುದಾಗಿ ಹೇಳಲಾಗಿದೆ.ಈ ಹಿಂದೆ 2022ರ ಫಿಫಾ ವಿಶ್ವಕಫ್‌ ನಲ್ಲಿ ಧಾರ್ಮಿಕ ಪ್ರವಚನ ನೀಡಲು ಕತಾರ್‌ ಜಾಕಿರ್‌ ನಾಯ್ಕ್‌ ಗೆ ಆಹ್ವಾನಿಸಿತ್ತು. ಭಾರತದಲ್ಲಿ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣದ ಆರೋಪ ಎದುರಿಸುತ್ತಿರುವ ಜಾಕೀರ್‌ ನಾಯ್ಕ್‌ 2017ರಿಂದ ವಿದೇಶದಲ್ಲಿದ್ದಾರೆ.

LEAVE A REPLY

Please enter your comment!
Please enter your name here