ರಂಗಿನಾಟಕ್ಕೆ ತಡೆಯೊಡ್ಡಿದ ಭಜರಂಗದಳ – 6 ಬಂಧನ

ಮಂಗಳೂರು: ನಗರದ ಮರೋಳಿ ಎಂಬಲ್ಲಿ ‘ರಂಗ್ ದೇ ಬರ್ಸಾ’ ಹೆಸರಿನಲ್ಲಿ ನಡೆಯುತ್ತಿದ್ದ ಹೋಳಿ ಸಂಭ್ರಮದ ಡಿಜೆ ಪಾರ್ಟಿಗೆ ಭಜರಂಗದಳ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಮಾ.26ರಂದು ನಡೆದಿದೆ.

ಡಿಜೆ ಪಾರ್ಟಿ ಜೊತೆಗೆ ಬಣ್ಣ ಎರಚಿ ಯುವಕ-ಯುವತಿಯರು ಸಂಭ್ರಮಿಸುತ್ತಿದ್ದು, ಅನ್ಯಕೋಮಿನ ಯುವಕರ ಜೊತೆ ಹೋಳಿ ಆಚರಣೆ ಎಂದು ಆರೋಪಿಸಿ ಭಜರಂಗದಳ ಸದಸ್ಯರು ದಾಳಿ ನಡೆಸಿ ಬ್ಯಾನರ್ ಹರಿದು ಹಾಕಿ ವಸ್ತುಗಳನ್ನು ಪುಡಿಗೈದಿದ್ದಾರೆ. ಈ ವೇಳೆ ಭಜರಂಗದಳ ಕಾರ್ಯಕರ್ತರು ಮತ್ತು ಆಯೋಜಕರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಭಜರಂಗದಳದ ಕಾರ್ಯಕರ್ತರು ಆಯೋಜಕರು ಮತ್ತು ಕೆಲವರ ಮೇಲೆ ಹಲ್ಲೆಗೂ ಯತ್ನಿಸಿರುವುದಾಗಿ ವರದಿಯಾಗಿದೆ.

ಹೋಳಿ ಹಬ್ಬದ ಈ ಡಿಜೆ ಪಾರ್ಟಿಗೆ ಪೊಲೀಸರಿಂದ ಅನುಮತಿ ಪಡೆದು ಖಾಸಗಿ ಜಾಗದಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆದರೆ ಪಾರ್ಟಿ ಆರಂಭಕ್ಕೆ ಮೊದಲೇ ಭಜರಂಗದಳದ ಕಾರ್ಯಕರ್ತರು ಎಂಟ್ರಿ ಕೊಟ್ಟು ಆಯೋಜಕರಿಗೆ ಶಾಕ್‌ ನೀಡಿದ್ದಾರೆ. ಮಾಹಿತಿ ಪಡೆದ ಕಂಕನಾಡಿ ಠಾಣಾ ಪೊಲೀಸರು ಪಾರ್ಟಿಗೆ ಬಂದವರನ್ನು ವಾಪಾಸ್‌ ಕಳುಹಿಸಿ 6 ಮಂದಿ ಭಜರಂಗದಳದ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಪಾರ್ಟಿ ಆಯೋಜಕರು ಅನುಮತಿ ಪಡೆದಿದ್ದರೂ ಅವರನ್ನು ವಶಕ್ಕೆ ಪಡೆದು ಬಳಿಕ ರಿಲೀಸ್‌ ಮಾಡಿದ್ದಾರೆ. ನಗರದಲ್ಲಿ ಇಂತಹ ಪಾರ್ಟಿಗಳ ಮೇಲೆ ಪದೇ ಪದೇ ದಾಳಿ ನಡೆಯುತ್ತಿರುವುದಕ್ಕೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಪೊಲೀಸರು ಪಾರ್ಟಿಗೆ ಅನುಮತಿ ನೀಡುತ್ತಾರೆ, ದಾಳಿ ಬಳಿಕ ಅವರೇ ಬಂದು ಪಾರ್ಟಿ ನಿಲ್ಲಿಸುವ ಕೆಲಸ ಮಾಡುತ್ತಾರೆ. ಅನುಮತಿ ನೀಡುವ ಮೊದಲೇ ಇದನ್ನೆಲ್ಲಾ ಯೋಚನೆ ಮಾಡಬಾರದೇ? ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ.  

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here