ಮಂಗಳೂರು : ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರದಿ ಅಂಗೀಕರಿಸಿದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಮಾ.27ರಂದು ಶಿಕಾರಿಪುರದಲ್ಲಿ ಬಂಜಾರ ಸೇವಾ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ನಿರತ ಬಂಜಾರ ಸಮುದಾಯದ ನೂರಾರು ಜನರು ಯಡಿಯೂರಪ್ಪ ಅವರ ಮನೆ ಕಡೆಗೆ ಬ್ಯಾರಕೇಡ್ ಮುರಿದು ನುಗ್ಗಿ, ಮನೆ ಮೇಲೆ ಕಲ್ಲು, ಚಪ್ಪಲಿ ತೂರಿದ್ದಾರೆ. ಕೆಲವು ಯುವಕರು ಕಚೇರಿ ಚಾವಣಿ ಏರಿ ಬಿಜೆಪಿ ಬಾವುಟವನ್ನು ಕಿತ್ತು ಹಾಕಿದ್ದು, ಮೋದಿ ಚಿತ್ರವಿದ್ದ ಫ್ಲಕ್ಸ್ ಗಳನ್ನು ಹರಿದು ಹಾಕಿದ್ದಾರೆ. ಅಲ್ಲದೇ ಯಡಿಯೂರಪ್ಪನವರ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಲಾಗಿದ್ದ ಸೀರೆಗಳನ್ನು ತಂದು ಸುಟ್ಟು ಹಾಕಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದು, ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
update: ನಿನ್ನೆ ಶಿಕಾರಿಪುರದಲ್ಲಿ ಭುಗಿಲೆದ್ದ ಬಂಜಾರ ಸಮಾಜದ ಆಕ್ರೋಶ ಇಂದು ಶಿವಮೊಗ್ಗದ ಗ್ರಾಮಾಂತರ ಕ್ಷೇತ್ರಕ್ಕೂ ಹಬ್ಬಿದೆ. ಕುಂಚೇನ ಹಳ್ಳಿ ತಾಂಡದ ಬಂಜಾರ ಸಮುದಾಯ ರಾಷ್ಟ್ರೀಯ ಹೆದ್ದಾರಿ ತಡೆದು ಬೆಂಕಿ ಹಚ್ಚಿ ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಒಂದು ಘಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದ ಪ್ರತಿಭಟನಾಕಾರರು ಚುನಾವಣೆಗೋಸ್ಕರ ಸರಕಾರ ಮಾಡಿರುವ ಗಿಮಿಕ್ ಸದಾಶಿವ ಆಯೋಗದ ವರದಿ, ಶಿಫಾರಸ್ಸು ತಡೆ ಹಿಡಿಯುವಂತೆ ಆಗ್ರಹಿಸಿದ್ದರೆ. ಪ್ರತಿಭಟನೆ ತಿರುವು ಪಡೆಯುತ್ತಿದ್ದು ಬಾಗಲಕೋಟೆ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಯ ಕಿಚ್ಚು ಹರಡಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ