ಮತದಾರರಿಗೆ ನೀಡಿದ ನಕಲಿ ಬೆಳ್ಳಿಯ ಅಸಲಿ ಕಥೆ -ವಿಡಿಯೋ ವೈರಲ್‌

ಮಂಗಳೂರು: ಹಾಸನದಲ್ಲಿ ಶಾಸಕ ಪ್ರೀತಂಗೌಡ ಮಹಿಳೆಯರಿಗೆ ಆಕರ್ಷಕ ಫ್ರೇಮ್ ನಲ್ಲಿ ಬೆಳ್ಳಿಯ ಅದೃಷ್ಟಲಕ್ಷ್ಮಿಯ ಸಣ್ಣ ವಿಗ್ರಹವನ್ನು ಉಡುಗೊರೆಯಾಗಿ ನೀಡಿದ್ದು ಅದರ ಅಸಲಿತ್ತು ಈಗ ಬಯಲಾಗಿದೆ. ನಕಲಿ ಬೆಳ್ಳಿಯ ಅಸಲಿ ಕಥೆಯ ವಿಡಿಯೋ ಎಲ್ಲೆಡೆ ವೈರಲ್‌ ಆಗಿದೆ. 

ಕಳೆದ ಹದಿನೈದು ದಿನದಿಂದ ಹಾಸನ ಕ್ಷೇತ್ರ ವ್ಯಾಪ್ತಿಯಲ್ಲಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮತದಾರರನ್ನು ಸೆಳೆಯಲು ಯತ್ನಿಸಲಾಗಿದ್ದು, ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ವಾರ್ಡ್ ವಾರು ಹಾಗೂ ಪಂಚಾಯತ್ ವಾರು‌ ಮಹಿಳೆಯರಿಗೆ ಆಮಿಷವೊಡ್ಡಿ ಈ  ಉಡುಗೊರೆಯಾಗಿ ನೀಡಲಾಗಿದೆ. ಪೊಲೀಸರ ಸಮ್ಮುಖದಲ್ಲೇ ನಿಯಮ ಉಲ್ಲಂಘನೆ ಮಾಡಿ ಆಮಿಷವೊಡ್ಡಲಾಗಿದೆ ಎಂದು ಜೆಡಿಎಸ್ ಆರೋಪಿಸಿದೆ. ಉಡುಗೊರೆ ಪಡೆದ ಮಹಿಳೆಯರು ಬೆಳ್ಳಿಯ ಅದೃಷ್ಟಲಕ್ಷ್ಮಿ ಪಡೆದ ಖುಷಿಯಲ್ಲಿ ಪೂಜೆಗೆ ಮುಂದಾಗಿದ್ದರು. ಆದರೆ  ಉಡುಗೊರೆ ಪ್ಯಾಕೆಟ್‌ ತೆರೆದಾಗ ಅದು ಬೆಳ್ಳಿಯದ್ದಲ್ಲ ಕಳಪೆ ವಸ್ತು ಎಂದು ಗೊತ್ತಾಗಿದ್ದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ಇಂತಹ ಗಿಪ್ಟ್ ಕೊಡಬೇಕಿತ್ತೇ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ. ಬೆಳ್ಳಿ ಬಣ್ಣದ ಪೇಪರ್‌ ನಲ್ಲಿ ಲಕ್ಷ್ಮಿ ವಿಗ್ರಹದ ಅಚ್ಚೊತ್ತಿ ಮತದಾರರಿಗೆ ನೀಡಲಾಗಿತ್ತು. 

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

LEAVE A REPLY

Please enter your comment!
Please enter your name here