ಮಂಗಳೂರು: ಉಪ್ಪಿನಂಗಡಿಯ ಪ್ರಖ್ಯಾತ ಬಟ್ಟೆ ಮಳಿಗೆ ವಿವಾ ಫ್ಯಾಶನ್ ಗೆ ಬೆಂಕಿ ಬಿದ್ದಿದ್ದು, ಹೊತ್ತಿ ಉರಿದಿದೆ.
ಬಹು ಮಹಡಿ ಕಟ್ಟಡದ ಒಂದು ಮತ್ತು ಎರಡನೇ ಮಹಡಿಯಲ್ಲಿ ಬಟ್ಟೆ ಶೋರೂಂ ಹೊಂದಿದ್ದು, ಬೆಳಗ್ಗೆ ಇದರೊಳಗಿನಿಂದ ಹೊಗೆ ಬರುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ.ಕ್ಷಣಾರ್ಧದಲ್ಲಿ ಬೆಂಕಿ ಹತ್ತಿಕೊಂಡಿದ್ದು ಮೊದಲ ಮಹಡಿಯ ಶೋಕೇಸ್, ಫರ್ನಿಚರ್ಸ್,ಬಟ್ಟೆ ಬರೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಎರಡನೇ ಮಹಡಿಯಲ್ಲೂ ಸುಮಾರು ಅರ್ಧಭಾಗ ಸುಟ್ಟು ಹೋಗಿದೆ. ಇನ್ವಾರ್ಟರ್ ಶಾರ್ಟ್ ಆಗಿ ಬೆಂಕಿ ಹತ್ತಿ ಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ, ಹಬ್ಬದ ಹಿನ್ನೆಲೆಯಲ್ಲಿ ತರಿಸಲಾಗಿದ್ದ ಹೊಸ ಸ್ಟಾಕ್ ಸೇರಿದಂತೆ ಸುಮಾರು 1 ರಿಂದ 2ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ