ಪ್ರಧಾನಿಯಿಂದ ದಿ ಎಲಿಫೆಂಟ್ ವಿಸ್ಪರರ್ಸ್ಸ್ ಖ್ಯಾತಿಯ ಬೆಳ್ಳಿ ಬೊಮ್ಮನ್ ಭೇಟಿ

ಮಂಗಳೂರು: ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ಸ್ ಖ್ಯಾತಿಯ ಬೆಳ್ಳಿ ಬೊಮ್ಮನ್ ದಂಪತಿಯನ್ನು ಪ್ರಧಾನ‌ ಮಂತ್ರಿ ನರೇಂದ್ರ ಮೋದಿ ಭೇಟಿ ಮಾಡಲಿದ್ದಾರೆ.

ಅನಾಥ ಆನೆಗಳನ್ನು ಸಾಕುವ ಕಾಯಕದಲ್ಲಿ ಈ ದಂಪತಿ ತೊಡಗಿಸಿಕೊಂಡಿದ್ದು ಅವರ ಜೀವನದ ಕಥೆಯನ್ನು ಎಲಿಫೆಂಟ್ ವಿಸ್ಪರರ್ಸ್ಸ್ ಸಾಕ್ಷ ಚಿತ್ರದಲ್ಲಿ ಮನ ಮುಟ್ಟುವಂತೆ ತೋರಿಸಲಾಗಿದೆ. ತಮಿಳುನಾಡಿನ ಮಧುಮಲೈ ಹುಲಿ ಸಂರಕ್ಷಿತ ಅರಣ್ಯದ ತೆಪ್ಪಕಾಡು ಆನೆ ಶಿಬಿರಕ್ಕೆ ಪ್ರಧಾನಿ ಮೋದಿ ಏ.9ರಂದು ಭೇಟಿ ನೀಡಲಿದ್ದಾರೆ. ಈ ಭೇಟಿ ವೇಳೆ ಪ್ರಧಾನಿ ಬೆಳ್ಳಿ ಬೊಮ್ಮನ್ ದಂಪತಿ ಜೊತೆ  ಮಾತುಕತೆ ನಡಸಲಿದ್ದಾರೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಬುಡಕಟ್ಟು ಪ್ರದೇಶದ ರಸ್ತೆಗಳನ್ನು ನವೀಕರಣ ಮಾಡಲಾಗಿದ್ದು, 30ಕ್ಕೂ ಅಧಿಕ ಕಂಬಗಳನ್ನು ಹಾಕುವ ಮೂಲಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here