ಮಂಗಳೂರು (ಜೈಪುರ ): ಇಲ್ಲಿನ ಝಲಾನ ಚಿರತೆ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯಂತೆ ಉಡುಪು ಧರಿಸಿ ನೀಲಗಾಯಿ ಒಂದಕ್ಕೆ ಆಹಾರ ನೀಡುತ್ತಿರುವ ವಿಡಿಯೋ ಒಂದನ್ನು ಕಾಮಿಡಿಯನ್ ಮತ್ತು ಮಿಮಿಕ್ರಿ ಕಲಾವಿದ ಶ್ಯಾಮ್ ರoಗೀಲ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಜೈಪುರ ಪ್ರಾದೇಶಿಕ ಅರಣ್ಯ ಅಧಿಕಾರಿ ಸಮನ್ಸ್ ಕಳುಹಿಸಿ ತಮ್ಮೆದುರು ಹಾಜರಾಗುವಂತೆ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ತಮ್ಮ ಇತ್ತೀಚಿಗಿನ ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಧರಿಸಿದ ಉಡುಪಿನಂತೆ ಉಡುಪು ಧರಿಸಿ ಶ್ಯಾಮ್ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.
ವನ್ಯಪ್ರಾಣಿಗಳಿಗೆ ಜನರು ಆಹಾರ ನೀಡುವುದು ಅರಣ್ಯ ಕಾಯ್ದೆ 1953 ಮತ್ತು ವನ್ಯಜೀವಿ ರಕ್ಷಣೆ ಕಾಯಿದೆ 1972 ಇದರ ಉಲ್ಲಂಘನೆಯಾಗಿದೆ ಎಂದು ಪ್ರಾದೇಶಿಕ ಅರಣ್ಯ ಅಧಿಕಾರಿ ಜ್ಞಾನೇಶ್ವರ್ ಚೌದರಿ ಹೇಳಿದ್ದಾರೆ.