ಮೈದಾನದಲ್ಲಿ ಎದುರಾಳಿ ಆಟಗಾರನ ಮೇಲೆ ದಾಳಿ ಕ್ರಿಸ್ಟಿಯಾನೋ ರೊನಾಲ್ಡೋ ಗೆ ಹಳದಿ ಕಾರ್ಡ್ 

ಹೊಸದಿಲ್ಲಿ : ಫೋರ್ಚುಗಲ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಅವರು ಅಲ್ ಹಿಲಾಲ್ ಮತ್ತು ಅಲ್ ನಸರ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮತ್ತೆ ಸುದ್ದಿಯಾಗಿದ್ದಾರೆ.

ರೊನಾಲ್ಡೋ ಅವರ ತಂಡ ಅಲ್ ಹಿಲಾಲ್ ವಿರುದ್ಧ 0-2 ಗೋಲುಗಳ ಹೀನಾಯ ಸೋಲು ಕಂಡಿದೆ. ಸೋಲಿನ ಹತಾಶೆಯಿಂದ ಎದುರಾಳಿ ತಂಡದ ಆಟಗಾರನ ಮೇಲೆ ಡಬ್ಲ್ಯೂ ಡಬ್ಲ್ಯೂ ಈ ಶೈಲಿಯಲ್ಲಿ ರೊನಾಲ್ಡೊ ದಾಳಿ ನಡೆಸಿದ್ದಾರೆ. ರೊನಾಲ್ಡೋ ಅವರು ಅಲ್ ಹಿಲಾಲ್ ನ ಗೆಸ್ಟವೊ ಕ್ಯೂಲರ್

ವಿರುದ್ಧ ಮೈದಾನದಲ್ಲಿ ಹಣಾಹಣಿ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಅಘಾತಕಾರಿ ಹಣಹಣಿಯಿಂದ ರೊನಾಲ್ಡೋ ಪಂದ್ಯದ 57ನೇ ನಿಮಿಷದಲ್ಲಿ ಹಳದಿ ಕಾರ್ಡು ಪಡೆಯುವಂತಾಯಿತು.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here