ಸೆ.1ರಿಂದ ಹೊಸ ಟೆಲಿಕಾಂ ನಿಯಮ- ಸ್ಪಾಮ್ ಕಾಲ್ ಗೆ ಕಡಿವಾಣ – ನಕಲಿ ಸಿಮ್‌ಕಾರ್ಡ್ 2 ವರ್ಷ ಬ್ಲಾಕ್‌ಲಿಸ್ಟ್‌ಗೆ

ಮಂಗಳೂರು (ಬೆಂಗಳೂರು): ಸೆ.1 ರಿಂದ ಟ್ರಾಯ್ ಹೊಸ ಟೆಲಿಕಾಂ ನಿಯಮ ಜಾರಿಗೆ ತರುತ್ತಿದೆ. ಈ ನಿಯಮದಡಿ, ಕೆಲವು ಸಿಮ್‌ಕಾರ್ಡ್ 2 ವರ್ಷದವರೆಗೆ ಬ್ಲಾಕ್‌ಲಿಸ್ಟ್‌ಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಟ್ರಾಯ್ ಹೊಸ ನಿಯಮದ ಪ್ರಕಾರ, ಗ್ರಾಹಕರಿಗೆ ಅನಗತ್ಯ ಕರೆ, ಫೇಕ್ ಕಾಲ್, ಜಾಹೀರಾತು ಸೇರಿದಂತೆ ಪ್ರಚಾರದ ಕರೆಗಳನ್ನು ಮಾಡುವಂತಿಲ್ಲ. ಟೆಲಿಕಾಂ ಸೇವೆ ಒದಗಿಸುವ ಕಂಪನಿಗಳು ನಕಲಿ ಕರೆಗಳಿಗೆ ಕಡಿವಾಣ ಹಾಕಬೇಕಾಗುತ್ತದೆ.

ಇದಕ್ಕಾಗಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ನೆರವು ಪಡೆದು ನಕಲಿ ಕರೆಗಳನ್ನು ನಿಯಂತ್ರಿಸಲು ಟ್ರಾಯ್ ಸೂಚಿಸಿದೆ. ಇದರ ಹೊರತಾಗಿಯೂ ಗ್ರಾಹಕರಿಗೆ ನಕಲಿ ಕರೆಗಳು ಬಂದಲ್ಲಿ, ಟೆಲಿಕಾಂ ಆಪರೇಟರ್ ಹಾಗೂ ನಕಲಿ ಕರೆ ಮಾಡಿದ ಸಂಸ್ಥೆಗಳು, ವ್ಯಕ್ತಿಗಳು ಶಿಕ್ಷೆಗೆ ಗುರಿಯಾಗಲಿದ್ದಾರೆ.

ನಕಲಿ ಕರೆ ಮಾಡುವ ಫೋನ್ ನಂಬರ್‌ಗಳನ್ನು 2 ವರ್ಷ ಬ್ಲಾಕ್‌ಲಿಸ್ಟ್‌ಗೆ ಸೇರ್ಪಡೆ ಮಾಡಲಾಗುತ್ತದೆ. ಸ್ಪಾಮ್ ಕಾಲ್ಸ್ ನಿಯಂತ್ರಿಸಲು ಟ್ರಾಯ್ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ.

LEAVE A REPLY

Please enter your comment!
Please enter your name here