ಮಂಗಳೂರು: ಕರ್ನಾಟಕದಲ್ಲಿ ಮಧ್ಯದ ದರವನ್ನು ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದೇಶದ ಅನ್ವಯ ಪ್ರತಿ ಮಧ್ಯದ ಬಾಟಲಿಯ ಮೇಲೆ ಹತ್ತರಿಂದ ಇಪ್ಪತ್ತು ರೂಪಾಯಿ ಗಳಷ್ಟು ಬೆಲೆ ಏರಿಕೆಯಾಗಲಿದೆ. ಈ ಮೂಲಕ, ಗ್ಯಾರೆಂಟಿಗಳ ಜಾರಿಯಿಂದ ಆಗುವ ರಾಜ್ಯ ಬೊಕ್ಕಸದ ಮೇಲಿನ ಹೊರೆಯನ್ನು ಇಳಿಸಿಕೊಳ್ಳಲು ಹಾಗೂ ಸಂಪನ್ಮೂಲ ಕ್ರೂಢೀಕರಣಕ್ಕಾಗಿ ರಾಜ್ಯ ಸರಕಾರ ಈ ಆದೇಶ ಹೊರಡಿಸಿದೆ ಎಂದು ವಿಶ್ಲೇಷಿಸಲಾಗಿದೆ. ಈ ಆದೇಶದಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ 65,000 ಕೋಟಿ ರೂಪಾಯಿಗಳ ಆದಾಯವನ್ನು ನಿರೀಕ್ಷಿಸಲಾಗಿದೆ.