ರಷ್ಯಾದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಏರ್‌ ಇಂಡಿಯಾ ವಿಮಾನ – ಪ್ರಯಾಣಿಕರ ಪರದಾಟ

ಹೊಸದಿಲ್ಲಿ: ಜೂನ್‌ 6ರಂದು ದಿಲ್ಲಿಯಿಂದ ಸ್ಯಾನ್‌ ಫ್ರಾನ್ಸಿಸ್ಕೋಗೆ 216 ಪ್ರಯಾಣಿಕರು ಮತ್ತು 16 ಸಿಬ್ಬಂದಿಗಳನ್ನು ಹೊತ್ತ  ಏರ್‌ ಇಂಡಿಯಾ ವಿಮಾನದ ಒಂದು ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ರಷ್ಯಾದ ಮಗಡನ್‌ ಎಂಬಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು, ವಿಮಾನದಲ್ಲಿದ್ದ ಪ್ರಯಾಣಿಕರು ಸಂಕಷ್ಟಕ್ಕೀಡಾದ ಘಟನೆ ವರದಿಯಾಗಿದೆ.

ಪ್ರಯಾಣಿಕರನ್ನು ಬಸ್ಸುಗಳ ಮೂಲಕ ಬೇರೆಡೆ ಸಾಗಿಸಲಾಗಿದ್ದು, ಕೆಲವರನ್ನು ಶಾಲೆಗಳಲ್ಲಿ, ಮತ್ತೆ ಕೆಲವರನ್ನು ಹಾಸ್ಟೆಲ್‌ ಗಳಲ್ಲಿ ಇರಿಸಲಾಗಿದೆ. ಆದರೆ  ಉತ್ತಮ ಸವಲತ್ತುಗಳಿಲ್ಲದೇ ಮಹಿಳೆಯರು, ಮಕ್ಕಳು ಮತ್ತು ವೃದ್ಧ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದೆ. ಪ್ರಯಾಣಿಕರ ಲಗೇಜುಗಳು ವಿಮಾನದಲ್ಲಿಯೇ ಇದ್ದು, ಕೆಲವು ಹಿರಿಯ ಪ್ರಯಾಣಿಕರು ಔಷಧದ ಕೊರತೆಯನ್ನು ಎದುರಿಸುವಂತಾಗಿದೆ. ಪ್ರಯಾಣಿಕರಿಗೆ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುವುದು ಮತ್ತು ಬದಲಿ ವಿಮಾನದ ವ್ಯವಸ್ಥೆ ಮಾಡಲಾಗುವುದು ಎಂದು ಏರ್‌ ಇಂಡಿಯಾ  ಹೇಳಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here