ನ್ಯಾಟೊ ಸೇರಲು ಬಂದಿರುವ ಆಹ್ವಾನವನ್ನು ತಿರಸ್ಕರಿಸಿದ ಭಾರತ

ಮಂಗಳೂರು :ನ್ಯಾಟೊ ಸೇರಲು ಬಂದಿರುವ ಆಹ್ವಾನವನ್ನು ನಯವಾಗಿ ತಿರಸ್ಕರಿಸಿರುವ ಭಾರತ ಚೀನಾದ ಅಕ್ರಮಣ ಸೇರಿದಂತೆ ಯಾವುದೇ ಸವಾಲುಗಳನ್ನು ಎದುರಿಸಲು ಭಾರತ ಸಮರ್ಥವಿರುವುದಾಗಿ ಹೇಳಿದೆ. ಈ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ದೃಡೀಕರಿಸಿದೆ.

ಭಾರತವು ಪಶ್ಚಿಮ ದೇಶಗಳ ನೇತೃತ್ವದ ನ್ಯಾಟೊ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್ ) ಸೇರುವ ಯಾವುದೇ ಉದ್ದೇಶ ಹೊಂದಿಲ್ಲ. ಈ ಪಶ್ಚಿಮ ಮೈತ್ರಿಕೂಟಕ್ಕೆ ಸೇರುವುದರಿಂದ ಭಾರತದ ಹಿತಾಸಕ್ತಿ ಪೂರೈಸಿದಂತಾಗದು ಎಂದು ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ತಿಳಿಸಿದ್ದಾರೆ. ನ್ಯಾಟೊ 31 ಸದಸ್ಯ ದೇಶಗಳ ಅಂತರ ಸರಕಾರಿ ಮೈತ್ರಿ ಕೂಟವಾಗಿದ್ದು ಇದರಲ್ಲಿ ಮುಖ್ಯವಾಗಿ ಯುರೋಪ್ ಮತ್ತು ಉತ್ತರ ಅಮೆರಿಕ ದೇಶಗಳಿವೆ. ಸೇನೆ ಮತ್ತು ರಾಜಕೀಯ ಸಹಕಾರದ ಮೂಲಕ ಈ ಕೂಟದ ಸದಸ್ಯ ದೇಶಗಳ ಸ್ವಾತಂತ್ರ್ಯ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದು ಇದರ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here