ಮಂಗಳೂರು : ಒಡಿಶಾ ರೈಲು ದುರಂತ ಹಾಗೂ ಭಾರತದ ರಾಷ್ಟ್ರೀಯ ಭದ್ರತೆ ಹಾಗೂ ಪ್ರಗತಿಯನ್ನು ದುರ್ಬಲಗೊಳಿಸಲು ನಡೆಯುತ್ತಿದೆ ಎನ್ನಲಾದ ಪ್ರಯತ್ನಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ನಿವೃತ್ತ ನ್ಯಾಯಾಧೀಶರು, ನಿವೃತ್ತ ಉನ್ನತ ಅಧಿಕಾರಿಗಳು, ಮಾಜಿ ರಾಯಭಾರಿಗಳು, ಭಾರತೀಯ ಬೇಹುಗಾರಿಕಾ ಸಂಸ್ಥೆ ರಾ ದ ಮಾಜಿ ಮುಖ್ಯಸ್ಥ, ಮಾಜಿ ಎನ್ಐಎ ನಿರ್ದೇಶಕ ಹಾಗೂ ನಿವೃತ್ತ ಸೇನಾಧಿಕಾರಿಗಳು ಸೇರಿದಂತೆ 270 ಪ್ರಮುಖ ನಾಗರಿಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಜೂನ್ 11ರಂದು ಪತ್ರ ಬರೆದಿದ್ದಾರೆ.
ಒಡಿಸ್ಸಾದಲ್ಲಿ 288 ಮಂದಿಯನ್ನು ಬಲಿ ತೆಗೆದುಕೊಂಡ ಹಾಗೂ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡ ತ್ರಿವಳಿ ರೈಲು ದುರಂತ ಉದ್ದೇಶಪೂರ್ವಕವಾಗಿ ನಡೆಸಲಾದ ಮಾನವ ಹತ್ತಕ್ಷೇಪದಿಂದಾಗಿ ಸಂಭವಿಸಿದೆ ಹಾಗೂ ಅದು ಉಗ್ರಮಗಾಮಿ ಸಂಘಟನೆಗಳ ಕುಮ್ಮಕ್ಕಿನಿಂದಾಗಿ ನಡೆದ ವಿದ್ವoಸಕ ಕೃತ್ಯವಾಗಿರಬಹುದು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಸಂದೇಹ ವ್ಯಕ್ತಪಡಿಸಿದ್ದಾರೆ. ನಮ್ಮಲ್ಲಿ ಕೆಲವರು ಜಮ್ಮು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದು , ಅಲ್ಲಿ ರೈಲ್ವೆ ಜಾಲಗಳ ಮೇಲೆ ವಿದ್ವಂಸಕ ಕೃತ್ಯಗಳು ನಡೆದಿರುವಂತಹ ಸನ್ನಿವೇಶಗಳನ್ನು ಎದುರಿಸಿದ್ದಾರೆ. ರೈಲ್ವೆ ಜಾಲಗಳಿಗೆ ಹಾನಿ ಮಾಡಲು ಹಾಗೂ ಎಂಟು ಭೀಕರ ಅವಘಡಗಳನ್ನು ನಡೆಸುವ ಉಗ್ರರ ಪ್ರಯತ್ನಗಳು ಸಮರ್ಪಕ ಭದ್ರತಾ ನಿಯೋಜನೆಗಳನ್ನು ಮಾಡಿದ್ದರಿಂದ ವಿಫಲವಾಗಿದ್ದವು ಎಂದವರು ನೆನಪಿಸಿದ್ದಾರೆ. ಜಮ್ಮುವಿನಲ್ಲಿ 1990 ಹಾಗೂ 2000 ಇಸವಿಯಲ್ಲಿ ಆರಂಭದಲ್ಲಿ ಕೆಲವು ರೈಲ್ವೆ ಹಳಿಗಳಿಗೆ ಹಾನಿಯುಂಟುಮಾಡಿದ್ದ ಕೆಲವು ಘಟನೆಗಳನ್ನು ಕೂಡ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.