ಉತ್ತರ ಪ್ರದೇಶದಲ್ಲಿ ಉಷ್ಣ ಮಾರುತ – ಚೆನ್ನೈ ನಲ್ಲಿ ಅಕಾಲಿಕ ಮಳೆ- ರಾಜ್ಯದಲ್ಲಿ ಬಾರೀ ಮಳೆಯ ಮುನ್ಸೂಚನೆ

ಮಂಗಳೂರು: ಉತ್ತರ ಪ್ರದೇಶದ ಬಲಿಯ ಪ್ರದೇಶದಲ್ಲಿ ಉಷ್ಣ ಮಾರುತದ ಕಾರಣದಿಂದ ವಿವಿಧ ಅಸ್ವಸ್ಥತೆಗೆ ಒಳಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದ ಮತ್ತೆ 11 ಮಂದಿ ಮೃತಪಟ್ಟಿದ್ದು, ಬಲಿಯಾದವರ ಒಟ್ಟು ಸಂಖ್ಯೆ 68ಕ್ಕೆ ಏರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನೊಂದೆಡೆ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧಡೆಗಳಲ್ಲಿ ಸೋಮವಾರ ವ್ಯಾಪಕ ಮಳೆಯಾಗಿದ್ದು, ಜೂನ್ ತಿಂಗಳಲ್ಲಿ ಚೆನ್ನೈ ನಗರದಲ್ಲಿ 27 ವರ್ಷಗಳಲ್ಲೇ ಗರಿಷ್ಠ ಮಳೆ ಬಿದ್ದಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚೆನ್ನೈ, ಗುಡಲೂರು, ಕರೈಕಲ್, ಪುದುಚೇರಿ, ದಿಂಡಿಗಲ್, ವಲ್ಪುರಿ, ಮತ್ತು ನಾಗಪಟ್ಟಣಂ ನಲ್ಲಿ ವ್ಯಾಪಕ ಮಳೆಯಾಗಿದ್ದು, ರಾಜ್ಯ ರಾಜಧಾನಿಯ ಮೀನಂಬಾಕಂನಲ್ಲಿ ಕಳೆದ 24 ಗಂಟೆಗಳಲ್ಲಿ 16ಸೆ.ಮಿ ಮಳೆಯಾಗಿದೆ.

ರಾಜ್ಯದಲ್ಲಿಯೂ ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕುಗೊಂಡಿದ್ದು ಕರಾವಳಿ, ಒಳನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜೂನ್.20ರಂದು(ಇಂದು) ಬಾರೀ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರು ಸುತ್ತುಮುತ್ತಲಿನ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಹಾಸನ, ಚಾಮರಾಜನಗರ, ಮೈಸೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮುನ್ಸೂಚನೆ ನೀಡಿದೆ.

LEAVE A REPLY

Please enter your comment!
Please enter your name here