ಪ್ರಾಣಿ ಪ್ರಪಂಚ – 6

ಮಕ್ಕಳಿಗಾಗಿ ವಿಶೇಷ ಮಾಹಿತಿ

ಜಿಂಕೆ ( Axis axis)

ಎಂಟರಿಂದ ಹದಿನಾಲ್ಕು ವರ್ಷ ಬದುಕುವ ಜಿಂಕೆಯು ದಟ್ಟ ಅರಣ್ಯ ಪ್ರದೇಶಗಳಲ್ಲಿ ಹರಿದ್ವರ್ಣದ ಅರಣ್ಯಗಳಲ್ಲಿ ಹಾಗೂ ಬಯಲು ಹುಲ್ಲುಗಾಡು ಪ್ರದೇಶದಲ್ಲಿ ಹೆಚ್ಚಾಗಿ ಕಾಣುತ್ತದೆ. ಭಾರತದ ಅರಣ್ಯಗಳಲ್ಲಿ ಜಿಂಕೆಯು ಅತೀ ಹೆಚ್ಚಾಗಿ ಕಾಣಸಿಗುವುದು. ಕಾಡಿನ ದಟ್ಟವನ ರಾಶಿಯ ನೆರಳಿನಲ್ಲಿ ಜೀವಿಸುತ್ತದೆ, ಸೂರ್ಯನ ರಶ್ಮಿ ಹಾಗೂ ಬಿಸಿಲ ಕಿರಣಗಳನ್ನು ಇವು ತಡೆಯಲಾರವು.
ಹೆಚ್ಚಾಗಿ ಉದ್ದ ಹುಲ್ಲು, ಗರಿಕೆ ಹಾಗೂ ಇನ್ನಿತರ ಚಿಕ್ಕ ಗಿಡಗಳು ಪೊದೆಗಳನ್ನು ತಿನ್ನುತ್ತದೆ. ಇದಲ್ಲದೆ ಮರ-ಗಿಡಗಳ ರೆಂಬೆ, ಕೊಂಬೆಗಳು, ಹಣ್ಣುಗಳನ್ನು ತಿನ್ನುತ್ತದೆ. ತನ್ನ ಹಿಂಗಾಲುಗಳ ಮೇಲೆ ನಿಂತು ಮರದ ರೆಂಬೆ ಎಲೆಗಳನ್ನು ಮೇಯುತ್ತದೆ. ಈ ಸಸ್ಯಹಾರಿ ಜಿಂಕೆಗಳು ತಮ್ಮದೇ ಉದುರಿದ ಕೊಂಬುಗಳನ್ನು ತಿನ್ನುತ್ತವೆ. ಅವುಗಳಲ್ಲಿನ ಮಿನರಲ್ ಅಂಶ ಹಾಗೂ ಪೌಷ್ಟಿಕ ಸತ್ವಗಳನ್ನು ಸೇವಿಸುತ್ತದೆ. ಹೆಚ್ಚಾಗಿ ಜಿಂಕೆಗಳನ್ನು ನೀರಿನ ಸೆಲೆ ಅಥವಾ ನದಿ, ಕೆರೆ ಈ ರೀತಿಯ ನೀರು ಹೇರಳವಾಗಿರುವ ಪ್ರದೇಶಗಳಲ್ಲಿ ಗುಂಪುಗಳಲ್ಲಿ ಕಾಣಬಹುದಾಗಿದೆ. ಉಷ್ಣತೆ ಹೆಚ್ಚಾದಾಗ ಬೇಸಿಗೆಯ ಕಾಲದಲ್ಲಿ ಹಗಲು-ಇರುಳು ನೀರನ್ನು ಸೇವಿಸುತ್ತದೆ.

ಪ್ರತಿ ಗಂಟೆಗೆ 65ಕಿ.ಮೀ ಚಲಿಸುವ ಜಿಂಕೆಗಳು ಉತ್ತಮವಾಗಿ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಹೊಂದಿರುತ್ತದೆ. ಇದರಿಂದ ಪರಭಕ್ಷಕರು ಸಮೀಪಿಸಿದಂತೆ ಅಲ್ಲಿಂದ ಓಡಿ ಸಂರಕ್ಷಿಸಿಕೊಳ್ಳುತ್ತದೆ. ಆದರೂ ಈ ಜಿಂಕೆಗಳು ಸಿಂಹ, ಹುಲಿ, ತೋಳ, ಚಿರತೆ, ಮೊಸಳೆಗಳಿಗೆ ಬಲಿಯಾಗಿ ಬಿಡುತ್ತವೆ. ಅದರಲ್ಲಿಯೂ ಚಿಕ್ಕ ಜಿಂಕೆಮರಿಗಳು ಹೆಚ್ಚಾಗಿ ಆಹಾರವಾಗಿ ಬಿಡುತ್ತವೆ. ಗಂಡು ಜಿಂಕೆಯು 30 ರಿಂದ 75 ಕೆಜಿ ತೂಕ ಹೊಂದಿರುತ್ತದೆ, ಹೆಣ್ಣು ಜಿಂಕೆಯು 25 ರಿಂದ 45 ಕೆಜಿ ತೂಕವಿದ್ದು, 67 ಇಂಚು ಅಗಲ, 35 ಇಂಚು ಎತ್ತರವಿರುತ್ತದೆ. ಜೊತೆಗೆ 8 ಇಂಚಿನ ಬಾಲವು ಇರುತ್ತದೆ. ದೊಡ್ಡ ಮೂಗು ಹಾಗೂ ಮೂಗಿನ ಹೊಳ್ಳೆಗಳನ್ನು ಹೊಂದಿದ್ದು, ಮೂರು ತಿರುಚಾದ ಮರದ ಗೊಂಬೆಯ ಆಕಾರವಿರುವಂತಹ 2.5 ಅಡಿ ಉದ್ದದ ಕೊಂಬನ್ನು ಹೊಂದಿರುತ್ತದೆ. ಪ್ರಸ್ತುತ ಶ್ರೀಲಂಕಾ, ಭಾರತ, ನೇಪಾಳ, ಬಾಂಗ್ಲಾದೇಶ, ಭೂತಾನ್ ನ ದಟ್ಟ ಕಾಡುಗಳಲ್ಲಿ ಇವೆ. ಭಾರತದಲ್ಲಿ ಪೂರ್ವ ರಾಜಸ್ಥಾನ್, ಗುಜರಾತ್, ಸಿಕ್ಕಿಂ, ಹಿಮಾಲಯ ತಪ್ಪಲು, ಉತ್ತರಾಂಚಲ, ನೇಪಾಳ, ಭೂತನ್ ಕಣಿವೆ ಪ್ರದೇಶದಲ್ಲಿ ಕಾಣಬಹುದು.

LEAVE A REPLY

Please enter your comment!
Please enter your name here