ಮಕ್ಕಳಿಗಾಗಿ ವಿಶೇಷ ಮಾಹಿತಿ
ವೀಸಲ್ (Mustela frenata)
ಕಂದು ಮುಂಗುಸಿಯು ಚಿಕ್ಕಗಾತ್ರದ ಮಾಂಸಾಹಾರಿ ಸಸ್ತನಿಯಾಗಿದೆ. ಆಸ್ಟ್ರೇಲಿಯಾ ಬಿಟ್ಟು ಉಳಿದೆಲ್ಲ ಕಡೆಗೆ ಕಾಣುತ್ತದೆ. ಪುಟ್ಟದಾದರೂ ಕ್ರೂರವಾಗಿದ್ದು ಇತರ ಎಲ್ಲ ಪ್ರಾಣಿಗಳನ್ನೂ ತಿನ್ನುತ್ತದೆ. ಮೂಗಿನಿಂದ ಬಾಲದ ತುದಿಯವರೆಗೆ 6 ಇಂಚು ಬೆಳೆಯುತ್ತದೆ. ಇವು ಏಕಾಂಗಿ ಪ್ರಾಣಿಗಳು. ಇವು ಪ್ರಾದೇಶಿಕ ಪ್ರಾಣಿಗಳಾಗಿದ್ದು ಗಸ್ತು ತಿರುಗುತ್ತದೆ. ಆಹಾರವನ್ನು ರಕ್ಷಿಸಲು ಗಂಡುಹೆಣ್ಣು ಪರಸ್ಪರ ಕಾಯುತ್ತವೆ. ಸಂಭೋಗದಲ್ಲಿರುವಾಗ ಮಾತ್ರ ಜೊತೆಯಾಗಿರುತ್ತವೆ. ಬಿರುಕುಸ್ಥಾನ, ಗಿಡದ ಬೇರು, ಪೊದರುಗಳಲ್ಲಿ ಗೂಡುಗಳನ್ನು ಕಟ್ಟುತ್ತವೆ. ಇವುಗಳ ಬಾಲವು 34ರಿಂದ 52 ಮಿ.ಮೀ ಉದ್ದವಿರುತ್ತವೆ.