ಮಕ್ಕಳಿಗಾಗಿ ವಿಶೇಷ ಮಾಹಿತಿ
ಅರೇಬಿಯನ್ ಒಂಟೆ
(Camelus dromedarius)
ಈ ಒಂಟೆಯು ದೊಡ್ಡ ಆಕಾರ ಹೊಂದಿದ್ದು ಸಮಾಕಾಲು ಬೆರಳುಗಳ ಗೊರಸು ಹೊಂದಿದ್ದು ಬೆನ್ನಿನ ಭಾಗ ಗೂನಾಗಿರುತ್ತದೆ. ಇವು ವಾಸಿಸುವ ಸ್ಥಳ ನಿಗದಿಯಾಗಿ ಹೇಳಲಾಗದಿದ್ದರೂ ಇವು ಅರೇಬಿಯನ್ ದ್ವೀಪದ್ದೆಂದು ಹೇಳಬಹುದು. ಉತ್ತರ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಮಿಡಲ್ ಈಸ್ಟ್ ಗಳಲ್ಲಿ ಪಳಗಿಸಿದ ಒಂಟೆಗಳು ದೊರೆಯುತ್ತವೆ. ಸವಾರಿ ಒಂಟೆಗಳು, ಒಂಟೆಗಳ ಜಾತಿಯ ಎರಡನೇ ದೊಡ್ಡ ಸದಸ್ಯರಾಗಿದೆ. ಮೊದಲನೆಯದು ಬ್ಯಾಕ್ಟ್ರೀಯನ್ ಒಂಟೆಗಳು. ಬೇರೆ ಜಾತಿಯ ಒಂಟೆಗಳು ಯಾವುದೆಂದರೆ ದಕ್ಷಿಣ ಅಮೇರಿಕಾದ ಒಂಟೆಗಳು.ಲಾಮ, ಅಲ್ಪಶಾ, ವಿಶುನ ಸವಾರಿ ಒಂಟೆಯ ಬೆನ್ನಿನ ಮೇಲೆ ಒಂದು ಗುನು ಇದ್ದರೆ ಬ್ಯಾಕ್ಟ್ರೀಯನ್ ಒಂಟೆಗಳ ಬೆನ್ನಿನ ಮೇಲೆ ಎರಡು ಗೂನುಗಳಿರುತ್ತವೆ. ವಯಸ್ಕ ಪುರುಷ ಒಂಟೆಗಳು 1.8 ರಿಂದ 2 m ಎತ್ತರ ಬೆಳೆಯುತ್ತದೆ. ಹೆಣ್ಣು ಒಂಟೆಗಳು 1.7 ಮೀಟರ್ ನಿಂದ 1.9 ಮೀಟರ್ ಎತ್ತರ ಬೆಳೆಯುತ್ತದೆ.
ಗಂಡು ಒಂಟೆಗಳ ತೂಕ ನಾಲ್ನೂರರಿಂದ 600 ಕೆಜಿ. ಹೆಣ್ಣು ಒಂಟೆಗಳು 300 ರಿಂದ 500 ಕೆಜಿ ತೂಕವಿರುತ್ತದೆ. ತುಂಬಾ ದೊಡ್ಡ ಗಂಡು ಒಂಟೆಗಳ ತೂಕ ಒಂದು ಸಾವಿರ ಕೆಜಿ ಇರುತ್ತದೆ. ಇವು ದೇಹದ ಉಷ್ಣಾಂಶವನ್ನು 34 ಡಿಗ್ರಿ ಸೆಲ್ಸಿಯಸ್ ನಿಂದ 41.7 ಡಿಗ್ರಿ ಸೆಲ್ಸಿಯಸ್ ವರೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ. ಇದರ ಸಹಾಯದಿಂದ ನೀರನ್ನು ಶೇಖರಿಸಿಕೊಳ್ಳುತ್ತದೆ ಇದರ ಉಣ್ಣೆಯು ತಿಳಿ ಕಂದು ಬಣ್ಣದ್ದಾಗಿದ್ದು ಪಕ್ವೆಯಲ್ಲಿ ಇನ್ನು ತಿಳಿಗಂದು ಬಣ್ಣವಿರುತ್ತದೆ. ಇದರ ಗುಂಪುಗಳು ಪ್ರಾದೇಶಿಕವಲ್ಲ, ನೂರಾರು ಪ್ರಾಣಿಗಳ ಗುಂಪುಗಳನ್ನು ಮಾಡಿಕೊಳ್ಳುತ್ತವೆ. ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ನೀರನ್ನು ಹುಡುಕಲು ಬೇರೆ ಗುಂಪುಗಳಲ್ಲಿ ಸೇರಿಕೊಳ್ಳುತ್ತದೆ.
ಮೈಥುನದ ಸಮಯದಲ್ಲಿ ಗಂಡು ಒಂಟೆಗಳು ಬಹಳ ಅಪಾಯಕಾರಿಯಾಗಿರುತ್ತದೆ ಬೇರೆ ಗಂಡು ಒಂಟೆಗಳ ಮೇಲೆ ಆಕ್ರಮಣ ಮಾಡುತ್ತವೆ. ಜಗಳವಾಡುತ್ತವೆ. ಎದುರಾಳಿಯ ತಲೆಯನ್ನು ತನ್ನ ಕಾಲುಗಳ ಮಧ್ಯ ಸಿಕ್ಕಿಸಿಕೊಂಡು ಜಯವನ್ನು ಘೋಷಿಸುತ್ತದೆ. ಗರ್ಭಿಣಿಯಾಗಿರುವ ಹೆಣ್ಣುಒಂಟೆ ಸಾಮಾನ್ಯವಾಗಿ ಗುಂಪಿನಿಂದ ಹೊರಗೆ ಇರುತ್ತದೆ. ಇಲ್ಲದಿದ್ದರೆ ಬೇರೆ ಗರ್ಭಿಣಿ ಒಂಟೆಗಳೊಂದಿಗೆ ಇರುತ್ತದೆ.