ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ-3 – ಜು.13ರಂದು ಉಡಾವಣೆ

ಮಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿದೆ. ಉಡಾವಣೆ ವಾಹನ ತಾಂತ್ರಿಕ ಜೋಡಣಾ ಕಾರ್ಯ ನಡೆಯುತ್ತಿದೆ. ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಬೃಹತ್ ಉಡಾವಣೆ ವಾಹನಕ್ಕೆ ಇಂಧನ ಪೂರೈಸುವ ಭಾಗವನ್ನು ಅಳವಡಿಸುವ ಕಾರ್ಯವನ್ನು ತಂತ್ರಜ್ಞರು ನಡೆಸಿದ್ದಾರೆ. ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಚಂದ್ರಯಾನ-3 ಜು.13ರಂದು ಆರಂಭವಾಗಲಿದೆ. ಇದು ಚಂದ್ರಯಾನ-2ರ ಮುಂದುವರಿದ ಭಾಗವಾಗಿದೆ. ಇದರ ಪ್ರಗತಿಯನ್ನು ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಒಟ್ಟು 3900 ಕೆಜಿ ತೂಕದ ನೌಕೆ ಇದಾಗಿದೆ.

ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here