ಪ್ರಾಣಿ ಪ್ರಪಂಚ-24

ಕಟ್ಟಿಗೆ ಹಾವು(Bungarus caeruleus)

 

ಮಕ್ಕಳಿಗಾಗಿ ವಿಶೇಷ ಮಾಹಿತಿ

ಬಂಗಾರಸ್‌ ಪ್ರಭೇದದ ಈ ಹಾವು ಹೆಚ್ಚಾಗಿ ಭಾರತದ ಕಾಡುಮೇಡುಗಳಲ್ಲಿ ಕಂಡುಬರುತ್ತದೆ. ಇದರ ವಿಷ ಬಹಳ ಅಪಾಯಕಾರಿ; ಇದರ ವಷ ನರನಾಡಿಗಳಲ್ಲಿ ಬೇಗ ಪಸರಿ ಪಾರ್ಶ್ವವಾಯು ಉಂಟಾಗಿ ಮನುಷ್ಯ ಸಾವನ್ನಪ್ಪುವನು.2-11 ಅಂಗುಲ ಉದ್ದದಿಂದ 5ಅಡಿ 9 ಇಂಚು ಉದ್ದದವರೆಗೂ ಬೆಳೆಯುತ್ತದೆ. ಕಪ್ಪು ಮತ್ತು ಕಡುನೀಲಿ ಬಣ್ಣದ ಈ ಹಾವು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಹಾಗೂ ಶ್ರೀಲಂಕಾದಲ್ಲಿ ಕಂಡುಬರುತ್ತದೆ.

ಹೊಲ ಗದ್ದೆಗಳಲ್ಲಿ, ಕಾಡುಗಳಲ್ಲಿ, ಪೊದೆಗಳಲ್ಲಿ, ಇಲಿಯ ಬಿಲಗಳಲ್ಲಿ ಹುತ್ತಗಳಲ್ಲಿ ಹಾಗೂ ಜನಸಂದಣಿಯಿರುವ ಪ್ರದೇಶಗಳಲ್ಲಿಯೂ ಕಂಡು ಬರುವುದು. ಒದ್ದೆ, ನೀರಿರುವ, ಪಾಚಿ,, ಕೆಸರಿರುವ ಜಾಗಗಗಳಲ್ಲಿಯೂ ವಾಸ ಮಾಡುತ್ತದೆ. ಹೆಚ್ಚಾಗಿ ನೀರಿನ ಸೆಲೆಯ ಬಳಿಯೇ ಇರುತ್ತದೆ.

ರಾತ್ರಿ ಸಮಯದಲ್ಲಿ ಬೇಟೆಯಾಡುವುದು, ಸಂಚರಿಸುವುದು ಹೆಚ್ಚು ಬೆಳಗಿನ ಸಮಯ. ಹೆಚ್ಚಾಗಿ ಮಣ್ಣೊಳಗೆ, ಇಟ್ಟಿಗೆ, ಕಲ್ಲುಗಳ ನಡುವೆ, ಇಲಿಯ ಬಿಲಗಳ ಓಲಗೆ ವೃತ್ತಾಕಾರದಲ್ಲಿ ಸುರುಳಿ ಸುತ್ತಿ ಕೂತಿರುತ್ತದೆ. ಈ ಪ್ರಭೇದದ ಹಾವು ಇಲಿ, ಕಪ್ಪೆ, ಹಲ್ಲಿ, ಜಿರಳೆ, ಇತರೆ ಸಣ್ಣ ಪ್ರಾಣಿಗಳನ್ನು ತಿನ್ನುವುದರೊಂದಿಗೆ ತನ್ನ ಜಾತಿಯ ಹಾವುಗಳನ್ನು, ತನ್ನ ಮರಿಗಳನ್ನೇ ತಿಂದುಬಿಡುವುದು. ಜೊತೆಗೆ ಇತರೇ ಜಾತಿಯ ಚಿಕ್ಕ ಹಾವುಗಳನ್ನೂ ತಿನ್ನುವುದು.

ತಲೆಯು ಚಪ್ಪಟೆಯಾಗಿದ್ದು, ದೇಹವು ನೀಳವಾಗಿದ್ದು, ಚೂಪು ಬಾಲ ಹೊಂದಿರುತ್ತದೆ. ಚರ್ಮದ ಮೇಲಿನ ಭಾಗವು ನೀಲಿ ಕಪ್ಪುಬಣ್ಣದದಿಂದ ಮಿನುಗುತ್ತದೆ. ನುಣುಪಾಗಿರುತ್ತದೆ. ಬೆನ್ನು ಮೂಳೆಯೂದ್ದಕ್ಕೂ, ಷಟ್‌ ಕೋನದ ಆಕಾರಗಳು ಇವೆ. ಉದರ ಭಾಗ ಹಾಗೂ ತುಟಿಯ ಮೇಲ್ಬಾಗ ಬಿಳಿ ಬಣ್ಣದ್ದಾಗಿರುತ್ತದೆ. ಕೋಪಗೊಂಡಾಗ, ವಿಚಲಿತವಾದಾಗ, ಬಾಲ ಮೇಲೆತ್ತುತ್ತದೆ, ತಲೆಯ ಭಾಗವನ್ನು ಮಾತ್ರ ಮುದುಡಿಕೊಂಡಿರುತ್ತದೆ, ಭುಸ್‌ ಎಂದು ಹೆದರಿಸುತ್ತದೆ, ನಂತರ ಕಚ್ಚುತ್ತದೆ.

 

LEAVE A REPLY

Please enter your comment!
Please enter your name here