ಯು.ಟಿ ಖಾದರ್‌ ಗೆ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ ಪ್ರದಾನ

    ಮಂಗಳೂರು: ಸ್ಪೀಕರ್ ಯು ಟಿ ಖಾದರ್ ಅವರಿಗೆ ಒಡಿಶಾ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾ. ಗೋಪಾಲ್ ಗೌಡ ಅಧ್ಯಕ್ಷತೆಯ ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ಸಂಸ್ಥೆಯಿಂದ ಗ್ರೇಟ್ ಸನ್ ಆಫ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ರವಿವಾರ ದಿಲ್ಲಿಯ ಇಂಡಿಯಾ ಇಂಟರ್ ನ್ಯಾಷನಲ್ ಸೆಂಟರ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

    ನ್ಯಾ. ಗೋಪಾಲ್ ಗೌಡ ಅವರು ಅಧ್ಯಕ್ಷತೆ ವಹಿಸಿದ್ದ ಈ ಕಾರ್ಯಕ್ರಮದಲ್ಲಿ ಛತ್ತೀಸ್ ಗಢದ ರಾಜ್ಯಪಾಲ ಬಿಸ್ವ ಭೂಷಣ್ ಹರಿಚರಣ್ ಅವರು ಭಾಗವಹಿಸಿದ್ದು, ಅವರ ಆತ್ಮಕತೆ ‘ಬ್ಯಾಟಲ್ ನಾಟ್ ಓವರ್’ ಕೃತಿಯ ಇಂಗ್ಲೀಷ್ ಅನುವಾದಿತ ಕೃತಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಸುಪ್ರೀಂ ಕೋರ್ಟ್ ನ್ಯಾಯಾಧೀಶ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

    ಇಂಡಿಯನ್ ಕಾನ್ಫರೆನ್ಸ್ ಆಫ್ ಇಂಟೆಲೆಕ್ಚುವಲ್ಸ್ ಸಂಸ್ಥೆಯಿಂದ ನೀಡಲಾಗುವ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಈ ಹಿಂದೆ ಹಲವು ಖ್ಯಾತ ನ್ಯಾಯಾಧೀಶರು, ಕಲಾವಿದರು, ಉದ್ಯಮಿಗಳು, ವಿಜ್ಞಾನಿಗಳು ಮತ್ತಿತರ ಹಿರಿಯ ಸಾಧಕರಿಗೆ ಹಾಗೂ ಬುದ್ಧಿಜೀವಿಗಳಿಗೆ ನೀಡಲಾಗಿತ್ತು.

    LEAVE A REPLY

    Please enter your comment!
    Please enter your name here