ಪ್ರಾಣಿ ಪ್ರಪಂಚ – 31

ನೀಲಗಿರಿ ಮಾರ್ಟೆನ್‌(Martes gwatkinsii)

ಮಕ್ಕಳಿಗಾಗಿ ವಿಶೇಷ ಮಾಹಿತಿ

ನೀಲಗಿರಿ ಮುಂಗುಸಿಯು ಆಕರ್ಷಕವಾದ ಚುರುಕಾದ ಸಸ್ತನಿಯಾಗಿದೆ. ಅರೆ ವ್ಯವಸಾಯ ಭೂಮಿಗೆ ಹೊಂದಿಕೊಂಡಿದೆ. ಇತರ ಮುಂಗಿಸಿಗಳಂತೆ ಇದೂ ಕೂಡ ಮಧ್ಯಮ ಗಾತ್ರದ ಮಾಂಸಾಹಾರಿ ಪ್ರಾಣಿಯಾಗಿದೆ. ದುಂಡಗಿನ ಕಿವಿಗಳು, ತ್ರಿಕೋನಾಕಾರದ ಮುಖ, ಉದ್ದ ದೇಹ, ಚಿಕ್ಕ ಕಾಲುಗಳು ಇದರ ಲಕ್ಷಣಗಳು. ಈ ತಳಿಯ ಮುಂಗುಸಿಗೆ ಮೃದುವಾದ, ದಟ್ಟವಾದ, ಕಂದುಬಣ್ಣದ ತುಪ್ಪಳಿವಿದ್ದು ಗಂಟಲಿನ ಮೇಲೆ ಹಳದಿ ಕುಡಿ ಇದೆ. ಅದರ ಬಾಲವು ಒರಟಾಗಿ ಬೆಳೆದಿದ್ದು ದೇಹವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ದೊಡ್ಡದಾದ ಪಂಜೆಗಳಿರುತ್ತವೆ. (ಹರಿತವಾದ ದೊಡ್ಡ ಉಗುರುಗಳು).

ಈ ಮುಂಗುಸಿಗಳ ಬಗ್ಗೆ ಹೆಚ್ಚಿವ ವಿಷಯಗಳು ಗೊತ್ತಾಗಿಲ್ಲ. ಅವುಗಳ ಬಲವಾದ ಒಳಕ್ಕೆಳೆದುಕೊಳ್ಳಬಲ್ಲ ಹರಿತವಾದ ಉಗುರುಗಳು ಮರಗಳನ್ನು ಅಪ್ಪಿ ಹಿಡಿದುಕೊಳ್ಳಲು ಅನುಕೂಲವಾಗುತ್ತವೆ. ಮುಂಗುಸಿಯ ಉದ್ದ ಒರಟು ಬಾಲವು ಮರ ಹತ್ತಲು, ಮರದ ಎತ್ತರದಲ್ಲಿ ನೇತಾಡಲು, ದೇಹದ ಸಮತೋಲನ ಕಾಯಲು ಉಪಯೋಗವಾಗುತ್ತದೆ. ಮುಂಗುಸಿಗಳು ಸಾಮಾನ್ಯವಾಗಿ ಇಡೀ ವರ್ಷ ಚಟುವಟಿಕೆಯಿಂದಿರುತ್ತವೆ. ಬೇಸಿಗೆಯಲ್ಲಿ ಗಂಡುಹೆಣ್ಣುಗಳು ಸಮಾಗಮವು ನಡೆಯುತ್ತದೆ. ಆ ಸಮಯವನ್ನು ಬಿಟ್ಟು ಉಳಿದ ಸಮಯದಲ್ಲಿ ಇವು ಏಕಾಂಗಿಯಾಗಿರುತ್ತವೆ.

ಈ ಮುಂಗುಸಿಗಳೂ ಬಹುಸಂಗಾತಿಗಳೊಡನೆ ಸಮಾಗಮ ಮಾಡುತ್ತವೆ. ಹೆಣ್ಣು ಮುಂಗುಸಿಗಳು 8 ರಿಂದ 9 ತಿಂಗಳು ಗರ್ಭ ಧರಿಸುತ್ತವೆ. ಮರಿಗಳಿಗೆ ಸ್ವಲ್ಪ ದಿನಗಳು ಕಣ್ಣುಗಳು ಕಾಣುವುದಿಲ್ಲ. ಕಿವಿಗಳು ಕೇಳುವುದಿಲ್ಲ. 3 ತಿಂಗಳಾದಾಗ ಮರಿಗಳು ತಾವೇ ಬೇಟೆಯಾಡುತ್ತವೆ. ಅವುಗಳ ಆಹಾರವು ಹಣ್ಣುಗಳು, ಕೀಟಗಳು, ಚಿಕ್ಕ ಪಕ್ಷಿಗಳು, ಸಸ್ತನಿಗಳು, ಜೇನುತುಪ್ಪ, ಹಾವುಗಳು ಮುಂತಾದವುಗಳು.

LEAVE A REPLY

Please enter your comment!
Please enter your name here