ಮಂಗಳೂರು(ಪುತ್ತೂರು): ಭಾರತದಿಂದ ಲಂಡನ್ನಿಗೆ ಹೇಗೆ ಪ್ರಯಾಣ ಮಾಡಬಹುದು ಎಂದು ಕೇಳಿದ್ರೆ ಹೆಚ್ಚಿನವರು ಹೇಳುವುದು ವಿಮಾನ ಮೂಲಕ, ವಿರಳವಾಗಿ ಕೆಲವರು ಹಡಗು ಮೂಲಕವೂ ಪ್ರಯಾಣಿಸುತ್ತಾರೆ. (ಮತ್ತೆ ಕೆಲವು ಸಾಹಸಿಗಳು ನಡ್ಕೊಂಡು, ಸೈಕಲ್, ಬೈಕ್, ಕಾರ್ ಮೂಲಕ ಹೋಗುತ್ತಾರೆ ಅದು ಬೇರೆ ವಿಷಯ ಬಿಡಿ) ಒಂದು ಕಾಲದಲ್ಲಿ ಲಂಡನ್ನಿಂದ ಭಾರತಕ್ಕೆ ಬಸ್ ಸರ್ವಿಸ್ ಇತ್ತು ಅಂದರೆ ನೀವು ನಂಬುತ್ತೀರಾ…? ಖಂಡಿತವಾಗಿಯೂ ಇತ್ತು.
ಮೊದಲ ಬಸ್ ಪ್ರಯಾಣ ಆರಂಭವಾಗಿದ್ದು 1957 ಎಪ್ರಿಲ್ 15ಕ್ಕೆ ಲಂಡನ್ನಿಂದ ಕೊಲ್ಕತ್ತಾ. ಇದನ್ನು ಆಪರೇಟ್ ಮಾಡುತ್ತಿದ್ದದ್ದು ಅಲ್ಬರ್ಟ್ ಟ್ರಾವೆಲ್ಸ್ ಎಂಬ ಬ್ರಿಟಿಷ್ ಕಂಪನಿ. ಏಪ್ರಿಲ್ 15ಕ್ಕೆ ಲಂಡನ್ ನಿಂದ ಹೊರಟ ಬಸ್ ಬೆಲ್ಜಿಯಂ, ಜರ್ಮನಿ, ಬಲ್ಗೇರಿಯ, ಟರ್ಕಿ, ಇರಾನ್, ಅಫ್ಘಾನ್, ಪಾಕಿಸ್ತಾನ ಅಲ್ಲಿಂದ ದೆಹಲಿ ಮಾರ್ಗವಾಗಿ ಕೊಲ್ಕತ್ತಾ ತಲುಪಿದ್ದು ಜೂನ್ 5 ಕ್ಕೆ ಅಂದ್ರೆ ಬರೋಬ್ಬರಿ ಐವತ್ತು ದಿನಗಳ ನಂತರ. ಅಂದು ಆ ಪ್ರಯಾಣಕ್ಕೆ ನಿಗದಿಪಡಿಸಿದ್ದ ದರ 85 ಪೌಂಡ್ ಗಳು ಅಂದ್ರೆ ಸುಮಾರು 9,000 ರೂಪಾಯಿಗಳು. ಬಸ್ಸು ಕ್ರಮಿಸುತ್ತಿದ್ದ ಒನ್ ವೆ ದೂರ 16,000 ಕಿಲೋಮೀಟರ್ ಗಳು. ಒಮ್ಮೆ ಪ್ರಯಾಣದ ಮಧ್ಯೆ ಈ ಬಸ್ಸು ಅಪಘಾತಕ್ಕೆ ಕೂಡ ಈಡಾಗಿತ್ತು. 1976 ರ ವರೆಗೆ ಸರ್ವಿಸ್ ನಡೆಸುತ್ತಿದ್ದ ಈ ಬಸ್ಸು ಆನಂತರದ ದಿನಗಳಲ್ಲಿ ಇರಾನಿನಲ್ಲಿ ನಡೆಯುತ್ತಿದ್ದ ನಾಗರಿಕ ಯುದ್ಧ ಮತ್ತು ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಇದ್ದ ಟೆನ್ಶನ್. ಈ ಕಾರಣಗಳಿಂದ ಬಸ್ ಸರ್ವಿಸ್ ಅನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ.
ಮಾಹಿತಿ/ಚಿತ್ರ
ಇಕ್ಬಾಲ್ ಪುತ್ತೂರು