ನೀಲಿ ತಿಮಿಂಗಲ (Balaenopters musculus)
ಮಕ್ಕಳಿಗಾಗಿ ವಿಶೇಷ ಸಂಚಿಕೆ
ನೀಲಿ ತಿಮಿಂಗಿಲಗಳು ಉಷ್ಣವಲಯದಲ್ಲಿ, ಧ್ರುವ ಪ್ರದೇಶಗಳ ನೀರಿನಲ್ಲಿ ಕಂಡುಬರುವ ದೊಡ್ಡ ಗಾತ್ರದ ತಿಮಿಂಗಿಲಗಳಾಗಿವೆ. ಇವುಗಳು ನೂರು ಅಡಿಗಳಿಗಿಂತ ಹೆಚ್ಚು ಉದ್ದವಿರುತ್ತವೆ.
ಇವು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಪ್ರಾಣಿಗಳಾಗಿವೆ. ಅದರ ಗಾತ್ರದ ಜೀವಿಯೂ ಹಿಂದೆಂದೂ ಇರಲಿಲ್ಲ. ವಿಶ್ವದಲ್ಲಿ ಇವುಗಳ ಮೂರು ಜಾತಿಗಳಿವೆ. ಉತ್ತರ ನೀಲಿ ತಿಮಿಂಗಿಲ, ದಕ್ಷಿಣ ನೀಲಿ ತಿಮಿಂಗಿಲ, ಕುಳ್ಳ ನೀಲಿ ತಿಮಿಂಗಿಲ. ಕುಳ್ಳ ನೀಲಿ ತಿಮಿಂಗಿಲ 24 ಮೀಟರ್ ಉದ್ದವಿರುತ್ತವೆ.
ಇವು ಸಾಮಾನ್ಯವಾಗಿ ಏಕಾಂಗಿಯಾಗಿರುತ್ತವೆ. ಗರ್ಜನೆ , ಕೀರಲು ಧ್ವನಿಗಳ ಮೂಲಕ ಪರಸ್ಪರ ಸಂಪರ್ಕವನ್ನು ಸಾಧಿಸುತ್ತವೆ. ಚಳಿಗಾಲದಲ್ಲಿ, ಮರಿ ಮಾಡುವ ಸಮಯದಲ್ಲಿ ಹೆಚ್ಚು ಶಬ್ದವನ್ನು ಮಾಡುತ್ತವೆ. ವಿಶ್ವದಲ್ಲಿ ಅತ್ಯಂತ ಜೋರಾಗಿ ಶಬ್ದ ಮಾಡುವ ಪ್ರಾಣಿ ಇದಾಗಿದೆ.