ಮಂಗಳೂರು(ಲಂಡನ್): ವೇಗವಾಗಿ ಹರಡುತ್ತಿರುವ ಒಮಿಕ್ರಾನ್ನಿಂದ ಬಂದಿರುವ ಹೊಸ ರೂಪಾಂತರ, EG.51 ಈಗ ಬ್ರಿಟನ್’ನಲ್ಲಿ ಕಾಣಿಸಿಕೊಂಡಿದೆ. ಎರಿಸ್ ಎಂದು ಕರೆಯಲ್ಪಡುವ ಈ ತಳಿ ಕಳೆದ ತಿಂಗಳು ಯುಕೆಯಲ್ಲಿ ಮೊದಲ ಬಾರಿ ಪತ್ತೆಯಾಗಿದ್ದು ಇದು ದೇಶದಾದ್ಯಂತ ವೇಗವಾಗಿ ಹರಡುತ್ತಿದೆ ಎಂದು ಇಂಗ್ಲೆಂಡ್‌ನ ಆರೋಗ್ಯ ಅಧಿಕಾರಿಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಏಳು ಹೊಸ ಕೋವಿಡ್ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಎರಿಸ್ ಎಂಬ EG.5.1 ಪತ್ತೆಯಾಗಿದೆ ಎಂದು ವರದಿ ಹೇಳಿದೆ. ಇತ್ತೀಚಿನ ದತ್ತಾಂಶಗಳ ಪ್ರಕಾರ ಆ ತಳಿ ಈಗ ಶೇ 14.6 ಪ್ರಕರಣಗಳಿಗೆ ಕಾರಣವಾಗಿದೆ ಎಂದು ಸೂಚಿಸುತ್ತದೆ ಎಂದು ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ ಹೇಳಿರುವುದಾಗಿ ಸ್ಪೈ ನ್ಯೂಸ್ ವರದಿ ಮಾಡಿದೆ.
ನಮ್ಮ ಹಿಂದಿನ ವರದಿಗೆ ಹೋಲಿಸಿದರೆ ಈ ವಾರ ಕೋವಿಡ್- 19 ಪ್ರಕರಣಗಳ ದರಗಳು ಹೆಚ್ಚಾಗುತ್ತಲೇ ಇವೆ. ರೆಸ್ಪಿರೇಟರಿ ಡೇಟಾಮಾರ್ಟ್ ಸಿಸ್ಟಮ್ ಮೂಲಕ ವರದಿ ಮಾಡಲಾದ 4,396 ಉಸಿರಾಟದ ಮಾದರಿಗಳಲ್ಲಿ ಶೇ 5.4 ಅನ್ನು ಕೋವಿಡ್ ಎಂದು ಗುರುತಿಸಲಾಗಿದೆ. ಈ ಹಿಂದೆ ಇದು 4,403 ರಲ್ಲಿ ಶೇ 3.7 ಆಗಿತ್ತು ಎಂದು ವರದಿಯಲ್ಲಿ ತಿಳಿಸಿದೆ.