ಗಾಂಧಿ – ಸಂಕ್ಷಿಪ್ತ ಜೀವನ ಕಥನ – 25

ಭಾರತಕ್ಕೆ ಸ್ವಾತಂತ್ರ್ಯ ಬಂದ ದಿನ ಗಾಂಧಿ ಎಲ್ಲಿದ್ದರು?

ಹಲವು ವರ್ಷಗಳ ಹೋರಾಟಗಳ ನಂತರ ಭಾರತವು 1947ರ ಆಗಸ್ಟ್‌ 15ರಂದು ವಿದೇಶಿಯರ ಆಳ್ವಿಕೆಯಿಂದ ಹೊರಬಂದು ಸ್ವಾತಂತ್ರ ದೇಶವಾಯಿತು. ಆದರೆ ಆ ದಿನ ಗಾಂಧಿ ದೆಹಲಿಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಇರಲಿಲ್ಲ. ಆ ದಿನ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಆಶಯವನ್ನು ಗಾಂಧಿ ಕೆಲವು ತಿಂಗಳುಗಳ ಹಿಂದೆ ವ್ಯಕ್ತ ಪಡಿಸಿದ್ದರು. ಆದರೆ ಬಂಗಾಳ ಪ್ರಾಂತ್ಯದಲ್ಲಿ ಕೋಮು ಹಿಂಸಾಚಾರವು ಭುಗಿಲೆದ್ದು ಹಲವಾರು ಜೀವಗಳು ಬಲಿಯಾಗಿದ್ದವು. ಆಸ್ತಿಪಾಸ್ತಿಗಳು ಲೂಟಿಯಾಗಿದ್ದವು ಗಾಂಧಿ ಆ ಪ್ರದೇಶಗಳಲ್ಲಿ  ಸತ್ತಾಡಿ ಹಿಂಸಾಚಾರವನ್ನು ಶಮನಗೊಳಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದರು. 1947ರ ಆಗಸ್ಟ್‌ 15ರಂದು ಇಡೀ ದೇಶವೇ ಕುಣಿದಾಡುತ್ತಿದ್ದಾಗ ಸ್ವಾತಂತ್ರ್ಯ ಹೋರಾಟವನ್ನು 27 ವರ್ಷಗಳ ಕಾಲ ಮುನ್ನಡೆಸಿದ್ದ ಗಾಂಧಿ ಕೊಲ್ಕೊತ್ತಾ ನಗರದಲ್ಲಿ ಹಿಂದೂ-ಮುಸ್ಲಿಂ ಕೋಮುಗಳ ನಡುವೆ ಸೌಹಾರ್ದತೆಯನ್ನು ತರುವ ಪ್ರಯತ್ನವಾಗಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿದ್ದರು.

LEAVE A REPLY

Please enter your comment!
Please enter your name here